Post office ಖಾತೆದಾರರೇ ಗಮನಿಸಿ, ಬದಲಾದ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ

Tue, 09 Mar 2021-11:00 am,

ಗ್ರಾಮೀಣ ಅಂಚೆ ಸೇವೆಯ ಶಾಖೆಯಲ್ಲಿ ಖಾತೆದಾರರು ದಿನದಲ್ಲಿ 20,000 ರೂಪಾಯಿಗಳನ್ನು ಹಿಂಪಡೆಯಬಹುದು, ಈ ಮೊದಲು ಈ ಮಿತಿ 5,000 ರೂ. ಇದಲ್ಲದೆ, ಯಾವುದೇ ಶಾಖೆಯ ಪೋಸ್ಟ್ ಮಾಸ್ಟರ್ (ಬಿಪಿಎಂ) ಒಂದು ದಿನದಲ್ಲಿ ಒಂದು ಖಾತೆಯಲ್ಲಿ 50,000 ರೂ.ಗಿಂತ ಹೆಚ್ಚಿನ ನಗದು ಠೇವಣಿ ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ. ಅಂದರೆ ಒಂದು ಖಾತೆಯಲ್ಲಿ ದಿನಕ್ಕೆ 50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸಲು ಸಾಧ್ಯವಿಲ್ಲ.

ಹೊಸ ನಿಯಮಗಳ ಪ್ರಕಾರ, ಉಳಿತಾಯ ಖಾತೆಯ ಹೊರತಾಗಿ, ಈಗ ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS), ಮಾಸಿಕ ಆದಾಯ ಯೋಜನೆ (MIS), ಕಿಸಾನ್ ವಿಕಾಸ್ ಪತ್ರ (KVP), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಗಳಿಗೂ ಕೂಡ ಚೆಕ್ ಮೂಲಕವೇ ಹಣ ಜಮಾ ಅಥವಾ ವಿತ್ ಡ್ರಾ ಮಾಡಲಾಗುತ್ತದೆ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ನಿಮಗೆ 4% ವಾರ್ಷಿಕ ಬಡ್ಡಿ ಸಿಗುತ್ತದೆ. ಅಂಚೆ ಕಚೇರಿಯಲ್ಲಿ ತೆರೆಯಲಾದ ಉಳಿತಾಯ ಖಾತೆಗೆ ಕನಿಷ್ಠ 500 ರೂಪಾಯಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಬಹಳ ಅವಶ್ಯಕ. ನಿಮ್ಮ ಖಾತೆಯಲ್ಲಿ 500 ರೂಪಾಯಿಗಿಂತ ಕಡಿಮೆ ಇದ್ದರೆ, 100 ರೂಪಾಯಿಗಳನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ - Post Office ಖಾತೆದಾರರಿಗೆ ಆಘಾತ! ಏಪ್ರಿಲ್ 1 ರಿಂದ ಅನ್ವಯವಾಗಲಿರುವ ಈ ನಿಯಮದ ಬಗ್ಗೆ ತಪ್ಪದೇ ತಿಳಿಯಿರಿ

- ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post Office Saving Schemes) - 5 ವರ್ಷದ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ - ಪೋಸ್ಟ್ ಆಫೀಸ್ ಸ್ಥಿರ ಠೇವಣಿ ಖಾತೆ - ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆ - ಹಿರಿಯ ನಾಗರಿಕ ಉಳಿತಾಯ ಯೋಜನೆ - 15 ವರ್ಷದ ಸಾರ್ವಜನಿಕ ಭವಿಷ್ಯ ನಿಧಿ ಖಾತೆ - ಸುಕನ್ಯಾ ಸಮೃದ್ಧಿ ಖಾತೆ - ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ - ಕಿಸಾನ್ ವಿಕಾಸ್ ಪತ್ರ

ಇದನ್ನೂ ಓದಿ - Post Office Schemes: ಉಳಿತಾಯ ಖಾತೆದಾರರಿಗೆ ಸಿಗಲಿದೆ ಈ ಸೌಲಭ್ಯ

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೇಲೆ ಸಿಗುವ ಬಡ್ಡಿ ಯೋಜನೆ  ಬಡ್ಡಿ (ಶೇಕಡಾವಾರು / ವಾರ್ಷಿಕ) ಪೋಸ್ಟ್ ಆಫೀಸ್ ಉಳಿತಾಯ ಖಾತೆ 4.0 1 ವರ್ಷದ ಟಿಡಿ ಖಾತೆ 5.5 2 ವರ್ಷದ ಟಿಡಿ ಖಾತೆ     5.5 5 ವರ್ಷದ ಟಿಡಿ ಖಾತೆ 6.7 5 ವರ್ಷದ ಆರ್ಡಿ 5.8 ಹಿರಿಯ ನಾಗರಿಕ ಉಳಿತಾಯ ಯೋಜನೆ 7.4 ಪಿಪಿಎಫ್      7.1 ಕಿಸಾನ್ ವಿಕಾಸ್ ಪತ್ರ 6.9 ಸುಕನ್ಯಾ ಸಮೃದ್ಧಿ ಖಾತೆ      7.6

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link