ಇಂದಿನಿಂದ ಹೊಸ ನಿಯಮ: ಈ ಕೆಲಸ ಮಾಡದಿದ್ದರೆ ಬಂದ್ ಆಗುತ್ತೆ ನಿಮ್ಮ ಪೋಸ್ಟ್ ಆಫೀಸ್ Savings Account
ಉಳಿತಾಯ ಖಾತೆಗಾಗಿ ಹೆಚ್ಚಿನ ಜನರು ಬ್ಯಾಂಕ್‌ಗಿಂತ ಪೋಸ್ಟ್ ಆಫೀಸ್ ಅನ್ನು ಆಯ್ಕೆ ಮಾಡುತ್ತಾರೆ. ಇದಕ್ಕೆ ಕಾರಣವೆಂದರೆ ಇಲ್ಲಿ ಬಡ್ಡಿದರ ಉತ್ತಮವಾಗಿದೆ ಮತ್ತು ಎರಡನೆಯದಾಗಿ ಅದನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಉಳಿತಾಯ ಖಾತೆಯು ಅಂಚೆ ಕಚೇರಿಯಲ್ಲಿದ್ದರೆ ಈಗ ನೀವು ಅದರಲ್ಲಿ ಕನಿಷ್ಠ ಮೊತ್ತವನ್ನು ಇಟ್ಟುಕೊಳ್ಳಬೇಕು. ಅಂಚೆ ಕಚೇರಿಯ ಉಳಿತಾಯ ಖಾತೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಇವುಗಳಲ್ಲಿನ ವಿಶೇಷ ಬದಲಾವಣೆಯೆಂದರೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವುದು.
ನಿಮ್ಮ ಉಳಿತಾಯ ಖಾತೆಯನ್ನು ಅಂಚೆ ಕಚೇರಿಯಲ್ಲಿ ನಿರ್ವಹಿಸಲು ನೀವು ಬಯಸಿದರೆ, ಕನಿಷ್ಠ ಮೊತ್ತವನ್ನು ಇಟ್ಟುಕೊಳ್ಳುವುದು ಅವಶ್ಯಕ. ಈ ಮೊತ್ತ 500 ರೂಪಾಯಿ. ಒಂದೊಮ್ಮೆ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವು ಇದಕ್ಕಿಂತ ಕಡಿಮೆಯಿದ್ದರೆ ಖಾತೆದಾರರು ಪ್ರತಿದಿನ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಇಂಡಿಯಾ ಪೋಸ್ಟ್ ಡಿಸೆಂಬರ್ 12 ರಿಂದ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಪೋಸ್ಟ್ ಆಫೀಸ್ (Post Office) ಮಾಡಿದ ಟ್ವೀಟ್ ಪ್ರಕಾರ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ನಿರ್ವಹಣಾ ಶುಲ್ಕವನ್ನು ತಪ್ಪಿಸಲು ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂಪಾಯಿಗಳನ್ನು ಇರಿಸಿ, ಇಲ್ಲದಿದ್ದರೆ ಹಣಕಾಸು ವರ್ಷದ ಕೊನೆಯಲ್ಲಿ ನಿರ್ವಹಣೆಯ ಹೆಸರಿನಲ್ಲಿ ಖಾತೆಯಿಂದ 100 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ. ಅಂದರೆ, ಎಂತಹದ್ದೆ ಪರಿಸ್ಥಿತಿಯಲ್ಲೂ ನೀವು ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂಪಾಯಿಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: Post Office: ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಡಬಲ್ ಆಗುತ್ತೆ ಗೊತ್ತಾ!
ನಿಮ್ಮ ಖಾತೆಯಲ್ಲಿ ಕನಿಷ್ಠ ಠೇವಣಿ ಇಲ್ಲದಿದ್ದರೆ, ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಇದಲ್ಲದೆ ಝೀರೋ ಬ್ಯಾಲೆನ್ಸ್ (Zero Balance) ಖಾತೆಯನ್ನು ಮುಚ್ಚಲಾಗುತ್ತದೆ. ಈ ಹಿನ್ನಲೆಯಲ್ಲಿ ನಿಮ್ಮ ಖಾತೆಯನ್ನು ಮುಚ್ಚಲು ನೀವು ಬಯಸದಿದ್ದರೆ, ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂಪಾಯಿಗಳನ್ನು ಇರಿಸಿ.
ಯಾವುದೇ ಹತ್ತಿರದ ಅಂಚೆ ಕಚೇರಿಯಲ್ಲಿ ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಖಾತೆಯನ್ನು ತೆರೆಯಬಹುದು. ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ವಾರ್ಷಿಕ ಬಡ್ಡಿದರ 4% ಆಗಿದೆ. ತಿಂಗಳ 10 ಮತ್ತು ತಿಂಗಳ ಅಂತ್ಯದ ನಡುವೆ ಉಳಿದಿರುವ ಕನಿಷ್ಠ ಮೊತ್ತದ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ: Post Office ಉಳಿತಾಯ ಖಾತೆಯ ನಿಯಮದಲ್ಲಿ ಬದಲಾವಣೆ
ಯಾವುದೇ ವಯಸ್ಕ ವ್ಯಕ್ತಿ ಒಂಟಿಯಾಗಿ ಅಥವಾ ಜಂಟಿಯಾಗಿ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಖಾತೆಯನ್ನು ತೆರೆಯಬಹುದು. ಯಾರಾದರೂ ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಅವನ / ಅವಳ ರಕ್ಷಕರು/ಪೋಷಕರು ಅವನ / ಅವಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಇದರಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರಿಂದ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿಯು ಅದರಲ್ಲಿ ಕೇವಲ ಒಂದು ಖಾತೆಯನ್ನು ತೆರೆಯಬಹುದು. ಇದಲ್ಲದೆ ಅಪ್ರಾಪ್ತ ಅಥವಾ ಮಾನಸಿಕವಾಗಿ ದುರ್ಬಲ ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆ ತೆರೆಯುವ ಸಮಯದಲ್ಲಿ ನಾಮಿನಿ ಅಗತ್ಯವಿದೆ.