Post Office Schemes: ಅಂಚೆ ಕಚೇರಿಯ 5 ಅದ್ಭುತ ಉಳಿತಾಯ ಯೋಜನೆಗಳು
ಪಿಪಿಎಫ್ ಜನರ ಅತ್ಯಂತ ವಿಶ್ವಾಸಾರ್ಹ ಯೋಜನೆಯಾಗಿದೆ. ಈ ಯೋಜನೆಯಡಿ ಅಂಚೆ ಇಲಾಖೆ ವಾರ್ಷಿಕ ಶೇ.7.1ರಷ್ಟು ಬಡ್ಡಿ ನೀಡುತ್ತದೆ. ಇದರಲ್ಲಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ವಿನಾಯಿತಿಗೆ ಅಹರ್ತೆಯಿದೆ. ಇದರಲ್ಲಿ ಹೂಡಿಕೆದಾರರು 1.5 ಲಕ್ಷ ರೂ.ವರೆಗೆ ತೆರಿಗೆ ಲಾಭ ಪಡೆಯಬಹುದು.
ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳಲ್ಲಿ ಒಂದಾಗಿರುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬಹುದು. ಕಡಿಮೆ ಬ್ಯಾಂಕುಗಳಿರುವ ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇದು ಬಹಳ ಜನಪ್ರಿಯವಾಗಿದೆ. ಈ ಯೋಜನೆಯಡಿ ಕನಿಷ್ಠ ಮೊತ್ತ 1000 ರೂ. ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಆಯ್ಕೆ ಮಾಡುವ ವ್ಯಕ್ತಿಗಳು ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಸುಕನ್ಯಾ ಸಮೃದ್ಧೀ ಯೋಜನೆಯು ಹೆಣ್ಣು ಮಕ್ಕಳ ಪ್ರಯೋಜನಕ್ಕಾಗಿ ಸರ್ಕಾರಿ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. 18 ವರ್ಷವಾದಾಗ ಆಕೆಯು ಖಾತೆಯ ಮಾಲೀಕಳಾಗುತ್ತಾಳೆ. ಈ ಯೋಜನೆಯ ಪ್ರಸ್ತುತ ಬಡ್ಡಿದರವು ಶೇ.7.6ರಷ್ಟಿದೆ. ಯೋಜನೆಗೆ ಸೇರಲು ಕನಿಷ್ಠ 250 ರೂ. ಆರಂಭಿಕ ಠೇವಣಿ ಅಗತ್ಯವಿದೆ. ಗರಿಷ್ಠ 1,50,000 ರೂ. ಠೇವಣಿ ಇಡಬಹುದು. ಇದು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯ್ತಿ ಒದಗಿಸುತ್ತದೆ.
ಈ ಯೋಜನೆಯು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಭ್ಯವಿದೆ. ಕನಿಷ್ಠ 1000 ರೂ.ಗೆ ಖಾತೆ ತೆರೆಯಬಹುದು. ಗರಿಷ್ಠ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಜನವರಿ ಮತ್ತು ಡಿಸೆಂಬರ್ ನಡುವೆ ಮಾಡಿದ ಠೇವಣಿಗಳ ಮೇಲೆ ವಾರ್ಷಿಕ ಶೇ.7.6ರಷ್ಟು ಬಡ್ಡಿದರ ಪಾವತಿಸುತ್ತದೆ. ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಸನ್ 80ಸಿ ಅಡಿ ಹೂಡಿಕೆ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಅಂಚೆ ಇಲಾಖೆ ನೀಡುವ ಸ್ಥಿರ ಆದಾಯ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯು ಭಾರತ ಸರ್ಕಾರದಿಂದ ಬೆಂಬಲತವಾಗಿದೆ. ಮೆಚುರಿಟಿ ಅವಧಿ 5 ವರ್ಷಗಳು. ಯಾವುದೇ ಗರಿಷ್ಠ ಹೂಡಿಕೆ ಮಿತಿ ಇದರಲ್ಲಿ ಇಲ್ಲ. 100 ರೂ. ಆರಂಭಿಕ ಹೂಡಿಕೆ ಮಾಡಬಹುದು. ತೆರಿಗೆದಾರರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಸನ್ 80ಸಿ ಅಡಿ ತೆರಿಗೆ ಪ್ರಯೋಜನ ಪಡೆಯಬಹುದು.