PPFನಿಂದ NPSವರೆಗೆ ನೌಕರರಿಗಾಗಿ ಇಲ್ಲಿದೆ ಟಾಪ್ 5 ಉತ್ತಮ ಹೂಡಿಕೆ ಆಯ್ಕೆಗಳು
ನೀವು ಉದ್ಯೋಗಸ್ಥರಾಗಿದ್ದರೆ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ವೇಳೆಗೆ ಉತ್ತಮ ಹಣವನ್ನು ಕಲೆಹಾಕಬಹುದು. ಸಂಬಳ ಪಡೆಯುವ ಉದ್ಯೋಗಿಗಳಿಗಾಗಿ ಉತ್ತಮ ರಿಟರ್ನ್ಸ್ ನೀಡುವ ಟಾಪ್ 5 ಹೂಡಿಕೆ ಆಯ್ಕೆಗಳೆಂದರೆ...
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ವಾರ್ಷಿಕವಾಗಿ 500ರೂ.ಗಳಿಂದ 1,50,000ರೂ.ಗಳವರೆಗಿನ ಹೂಡಿಕೆಯಲ್ಲಿ ಗ್ರಾಹಕರಿಗೆ 7.1% ಬಡ್ಡಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಈ ಹೂಡಿಕೆಯು ಆದಾಯ ತೆರಿಗೆಯನ್ನು ಉಳಿಸಲು ಕೂಡ ಪ್ರಯೋಜನಕಾರಿ ಆಗಿದೆ.
ಉತ್ತಮ ಮೊತ್ತವನ್ನು ಕಲೆಹಾಕಲು ಸ್ಥಿರ ಠೇವಣಿಗಳು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಸ್ಥಿರ ಠೇವಣಿಗಳಲ್ಲಿ ವಿವಿಧ ಬ್ಯಾಂಕ್ ಗಳು ವಿವಿಧ ಬಡ್ಡಿದರವನ್ನು ನೀಡುತ್ತದೆ. ಅಷ್ಟೇ ಅಲ್ಲ, ಟ್ಯಾಕ್ಸ್ ಸೇವಿಂಗ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆಯನ್ನು ಸಹ ಉಳಿಸಬಹುದು.
ಹೆಸರೇ ಸೂಚಿಸುವಂತೆ, ಇಕ್ವಿಟಿ ಫಂಡ್‌ಗಳು ವಿವಿಧ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದಾದ ಉತ್ತಮ ಆಯ್ಕೆಗಳು. ಈ ಫಂಡ್‌ಗಳ ಕಾರ್ಯಕ್ಷಮತೆಯು ವಿವಿಧ ಮಾರುಕಟ್ಟೆ ಪರಿಸ್ಥಿತಿಗಳನ್ನು ಅವಲಂಬಿಸಿರುವುದರಿಂದ ಇದರಲ್ಲಿ ಹೂಡಿಕೆ ಮಾಡುವಾಗ ಅಪಾಯದ ಬಗ್ಗೆಯೂ ಅರಿವಿರುವುದು ಅಗತ್ಯವಾಗಿದೆ.
ಸ್ವಯಂಪ್ರೇರಿತ ಭವಿಷ್ಯ ನಿಧಿ ಅಥವಾ ವಿಪಿಎಫ್ ಉದ್ಯೋಗಿಗಳಿಂದ ಭವಿಷ್ಯ ನಿಧಿ ಖಾತೆಗೆ ಐಚ್ಛಿಕ ನಿಧಿ ಕೊಡುಗೆಯಾಗಿದೆ. ಉದ್ಯೋಗಸ್ಥರು ತಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇದು ಇದೊಂದು ಉತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು.
ಎನ್‌ಪಿಎಸ್/ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ನಾಗರಿಕರಿಗೆ ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಖಾತ್ರಿಪಡಿಸುವ ಜನಪ್ರಿಯ ಹಣಕಾಸು ಯೋಜನೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿ ನಂತರದ ಜೀವನವನ್ನು ಆರಾಮದಾಯಕವಾಗಿ ಕಳಿಯಲು ಸಾಧ್ಯವಾಗುತ್ತದೆ.