PPF vs SIP: ಎಲ್ಲಿ ಹಣ ಹೂಡಿದ್ರೆ ನೀವು ಮಿಲಿಯನೇರ್ ಆಗುತ್ತೀರಿ ಗೊತ್ತಾ?
PPFನ ಮೆಚುರಿಟಿ ಅವಧಿಯು 15 ವರ್ಷಗಳು, ಆದರೆ ನೀವು ಅದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ನೀವು ವಾರ್ಷಿಕವಾಗಿ 1.5 ಲಕ್ಷ ರೂ.ಗಳನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ ಹೂಡಿಕೆಯು 22,50,000 ಲಕ್ಷ ರೂ. ಆಗುತ್ತದೆ. ಆದರೆ ಮೆಚ್ಯೂರಿಟಿಯಲ್ಲಿ ನೀವು 40,68,209 ರೂ.ಗಳನ್ನು ಪಡೆಯುತ್ತೀರಿ.
ನೀವು PPFನ್ನು 5 ವರ್ಷಗಳವರೆಗೆ ವಿಸ್ತರಿಸಿದರೆ 20 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಮೊತ್ತವು 30,00,000 ರೂ. ಆಗುತ್ತದೆ. ಇದರ ಮೇಲೆ ನೀವು ಶೇ.7.1ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಇದರ ಪ್ರಕಾರ ನೀವು ಅವಧಿ ಮುಕ್ತಾಯದ ಮೇಲೆ 66,58,288 ರೂ. ಪಡೆಯುತ್ತೀರಿ.
ನೀವು ಇದನ್ನೂ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದರೆ, ಅಂದರೆ ನೀವು ನಿರಂತರವಾಗಿ 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ ದೊಡ್ಡ ಮೊತ್ತವನ್ನು ಪಡೆಯುತ್ತೀರಿ. 12,500 ರೂ.ಗಳ ಮಾಸಿಕ ಹೂಡಿಕೆಯಲ್ಲಿ 25 ವರ್ಷಗಳಲ್ಲಿ ಒಟ್ಟು 37,50,000 ರೂ. ಆಗುತ್ತದೆ. ನಿಮ್ಮ ಮೆಚ್ಯೂರಿಟಿಯ ಮೊತ್ತ ಒಟ್ಟು 1,03,08,015 ರೂ. ಆಗುತ್ತದೆ.
ನೀವು ಪ್ರತಿ ತಿಂಗಳು 12,500 ರೂ.ಗಳನ್ನು ಅಂದರೆ ಒಂದು ವರ್ಷದಲ್ಲಿ 1.5 ಲಕ್ಷ ರೂ.ಗಳನ್ನು SIPನಲ್ಲಿ ಹೂಡಿಕೆ ಮಾಡಿದರೆ, ನೀವು ಸುಮಾರು ಶೇ.12ರಷ್ಟು ದರದಲ್ಲಿ ಆದಾಯವನ್ನು ಪಡೆಯುತ್ತೀರಿ.
19 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆಯು 28,50,000 ರೂ. ಆಗಿರುತ್ತದೆ ಮತ್ತು ನೀವು ಶೇ.12ರ ಆದಾಯದಲ್ಲಿ 1,09,41,568 ರೂ. ಪಡೆಯುತ್ತೀರಿ.
ಇದಲ್ಲದೇ 37,50,000 ರೂ.ಗಳನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1,03,08,015 ರೂ.ಗಳನ್ನು ರಿಟರ್ನ್ ಆಗಿ ಪಡೆಯುತ್ತೀರಿ.
SIPನಲ್ಲಿ ನೀವು ಕಡಿಮೆ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುತ್ತೀರಿ. ಇದಲ್ಲದೆ ನೀವು SIPನಲ್ಲಿ ಇನ್ನೂ ಹೆಚ್ಚಿನ ಆದಾಯವನ್ನು ಪಡೆಯಬಹುದು ಅಂದರೆ 15 ರಿಂದ 20 ಪ್ರತಿಶತ. ಮಾರುಕಟ್ಟೆಯ ಟ್ರೆಂಡ್ ಉತ್ತಮವಾಗಿದ್ದರೆ ನಿಮ್ಮ ಆದಾಯವೂ ಹೆಚ್ಚಾಗಬಹುದು.