Prabhas Fees: ಪ್ರಭಾಸ್‌ 2.20 ನಿಮಿಷ ಡೈಲಾಗ್‌ಗೆ ಪಡೆದದ್ದು ಎಷ್ಟು ಕೋಟಿ ಗೊತ್ತೇ.. ಪ್ರತಿ ಸೆಕೆಂಡ್‌ಗೆ ಸಿಕ್ಕ ಹಣ ಎಷ್ಟು?

Thu, 01 Feb 2024-3:55 pm,

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸತತ ನಾಲ್ಕು ಸೋಲುಗಳ ಬಳಿಕ ಮತ್ತೊಮ್ಮೆ ಸಕ್ಸಸ್‌ಫುಲ್ ಸಿನಿಮಾ ಕೊಟ್ಟಿದ್ದಾರೆ. 

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

ಸಲಾರ್ ರಿಲೀಸ್ ಆಗಿ ಓಟಿಟಿಗೂ ಬಂದಿದೆ. ಇದೀಗ ಈ ಸಿನಿಮಾ ಬಗ್ಗೆ ಒಂದು ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. 

ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಅವರ ಡೈಲಾಗ್‌ ವಿಚಾರ ಸುದ್ದಿಯಲ್ಲಿದೆ. ಇಡೀ ಸಿನಿಮಾದಲ್ಲಿ'ಸಲಾರ್' ಸಿನಿಮಾದಲ್ಲಿರುವ ಪ್ರಭಾಸ್ ಡೈಲಾಗ್‌ಗಳನ್ನು ಕಲೆ ಹಾಕಿದರೆ 2 ನಿಮಿಷ 20 ಸೆಕೆಂಡ್ ಮಾತ್ರ ಮಾತನಾಡಿದ್ದಾರೆ. 

ಸಲಾರ್‌ ಸಿನಿಮಾಗೆ ಪ್ರಭಾಸ್ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಶೇ.10ರಷ್ಟು ಲಾಭ ಕೂಡ ಪಡೆದಿದ್ದಾರೆ. ಒಟ್ಟು ಈ ಸಿನಿಮಾಗೆ ಪ್ರಭಾಸ್‌ 125 ರಿಂದ 130 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

2 ಗಂಟೆ 55 ನಿಮಿಷಗಳ ಸಿನಿಮಾದಲ್ಲಿ ಒಂದು ಸೆಕೆಂಡ್‌ ಡೈಲಾಗ್‌ಗೆ ಪ್ರಭಾಸ್ ಅಂದಾಜು 80 ರಿಂದ 85 ಲಕ್ಷ ರೂಪಾಯಿ ತೆಗೆದುಕೊಂಡಂತೆ ಆಗುತ್ತೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link