ಸ್ಟಾರ್‌ ನಟಿ ಜೊತೆ ಪ್ರಭಾಸ್‌ ಡೇಟಿಂಗ್‌..! ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಅರ್ಧಂಬರ್ಧ ಬಟ್ಟೆಯಲ್ಲಿ ನಟ.. ಫೋಟೋಸ್‌ ವೈರಲ್‌

Sun, 29 Dec 2024-2:45 pm,

ರೆಬೆಲ್ ಸ್ಟಾರ್ ಪ್ರಭಾಸ್ ತೆಲುಗು ಹೀರೋಗಳಲ್ಲಿ ವಿಶೇಷ ಹೆಸರು ಮಾಡಿರುವ ನಾಯಕ. ಕೃಷ್ಣಂರಾಜು ಅವರ ಉತ್ತರಾಧಿಕಾರಿಯಾಗಿ.. ಅದರಲ್ಲೂ ಬಾಹುಬಲಿ ಸಿನಿಮಾದ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದರು..    

ಸದ್ಯ ಸೌತ್‌ಸಿನಿರಂಗದಲ್ಲಿ ಮೋಸ್ಟ್ ಮಾರ್ಕೆಟಬಲ್ ಹೀರೋ ಯಾರು ಅಂದ್ರೆ.. ಮೊದಲ ಹೆಸರು ಕೇಳಿಬರುವುದು ಖಂಡಿತ ಪ್ರಭಾಸ್. ಬಾಹುಬಲಿ ನಂತರ, ಕೆಲವು ಫ್ಲಾಪ್‌ ಸಿನಿಮಾ ಕಂಡಿದ್ದ ನಟ ಇತ್ತೀಚೆಗೆ ಸಲಾರ್ ಮತ್ತು ಕಲ್ಕಿ ಚಿತ್ರಗಳ ಸತತ ಯಶಸ್ಸನ್ನು ಪಡೆದರು..      

ಸದ್ಯ ಪ್ರಭಾಸ್‌ ಮಾರುತಿ ನಿರ್ದೇಶನದ ಮುಂಬರುವ ಚಿತ್ರ ದಿ ರಾಜಾ ಸಾಬ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸೀತಾರಾಮ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಪಡೆದ ನಿರ್ದೇಶಕ ರಾಘವಪುಡಿ ಅವರ ನಿರ್ದೇಶನದಲ್ಲಿಯೂ ಪ್ರಭಾಸ್ ಸಿನಿಮಾ ಮಾಡಲಿದ್ದಾರೆ.    

ಈ ಕ್ರಮದಲ್ಲಿ ಮೃಣಾಲ್ ಠಾಕೂರ್ ಕೂಡ ಈ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಬಂದಿವೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು.. ಪ್ರಭಾಸ್ ಮೃಣಾಲ್ ಜೊತೆ ವಿಹಾರಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೋಟೋಗಳು ಕೂಡ ವೈರಲ್ ಆಗುತ್ತಿವೆ.    

ಆದರೆ ಇವೆಲ್ಲವೂ ಸಹ.. AI ನೊಂದಿಗೆ ರಚಿಸಲಾದ ಚಿತ್ರಗಳು.. ಯಾರೋ ಈ ರೀತಿ ಎಡಿಟ್‌ ಮಾಡಿ ವೈರಲ್‌ ಮಾಡಿದ್ದಾರೆ. ಅದೂ ಕೂಡ ಇಬ್ಬರು ಸ್ವಿಮ್ಮಿಂಗ್‌ ಡ್ರೇಸ್‌ನಲ್ಲಿ ಇರುವ ರೀತಿ ಎಡಿಟ್‌ ಮಾಡಿದ್ದಾರೆ..   

ಈ ಹಿಂದೆ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲವು ದಿನಗಳ ನಂತರ ಕೃತಿ ಸನನ್ ಮತ್ತು ಪ್ರಭಾಸ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಯೂ ಬಂತು. ಈಗ ಮೃಣಾಲ್‌ ಜೊತೆಗಿನ AI ಜನರೇಟರ್ ಚಿತ್ರಗಳು ವೈರಲ್‌ ಆಗುತ್ತಿವೆ..  

Ai ಚಿತ್ರಗಳಲ್ಲಿ ಪ್ರಭಾಸ್ ಮತ್ತು ಮೃಣಾಲ್ ಸ್ವಿಮ್ಮಿಂಗ್‌ ಫುಲ್‌ನಲ್ಲಿ ಇರುವ ದೃಶ್ಯಗಳಿವೆ. ಒಟ್ಟಾರೆಯಾಗಿ, ಈ AI ಚಿತ್ರಗಳು ಡಾರ್ಲಿಂಗ್‌ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿವೆ.. ಅಲ್ಲದೆ, ಈ ರೀತಿ ಎಡಿಟ್‌ ಮಾಡಿದವರ ವಿರುದ್ಧ  ಸೈಬರ್‌ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link