Pradosh Vrat 2024: ಇಂದು ಇವುಗಳಲ್ಲಿ ಯಾವುದಾದರು ಒಂದು ವಸ್ತು ಮನೆಗೆ ತಂದರೂ ಇಷ್ಟಾರ್ಥ ಸಿದ್ಧಿ
ಪ್ರತಿ ತಿಂಗಳ ತ್ರಯೋದಶಿಯ ದಿನ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಭಕ್ತಿ-ಭಾವದಿಂದ ಉಪವಾಸ ಆಚರಿಸಿ ಶಿವನನ್ನು ಆರಾಧಿಸುವುದರಿಂದ ಮಹಾದೇವ ಪ್ರಸನ್ನನಾಗುತ್ತಾನೆ. ಭಕ್ತರ ಕೂಗಿಗೆ ಕಿವಿಗೊಡುತ್ತಾನೆ ಎಂದು ನಂಬಲಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕ ಫೆಬ್ರವರಿ 7 ರಂದು ಅಂದರೆ ಇಂದು ಇರಲಿದೆ. ಇಂದು ಪ್ರದೋಷ ವ್ರತವನ್ನು ಆಚರಿಸುವುದರ ಜೊತೆಗೆ ಮನೆಗೆ ಕೆಲವು ವಸ್ತುಗಳನ್ನು ತರುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಿಶೇಷ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರದೋಷವ್ರತದ ದಿನ ಇವುಗಳಲ್ಲಿ ಯಾವುದೇ ಒಂದು ವಸ್ತುವನ್ನು ಮನೆಗೆ ತರುವುದರಿಂದಲೂ ಭಗವಾನ್ ಶಿವನ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ತಲೆದೂರಿರುವ ಸಮಸ್ಯೆಗಳಿಂದ ಮುಕ್ತಿ, ಜೊತೆಗೆ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೆ ಪ್ರದೋಷ ವ್ರತದ ದಿನ ಯಾವ ವಸ್ತುಗಳನ್ನು ಖರೀದಿಸಿದರೆ ಶುಭ ಎಂದು ತಿಳಿಯೋಣ...
ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರದೋಷ ಉಪವಾಸದ ದಿನದಂದು ಚಂದ್ರನ ಮತ್ತು ಶಿವನ ಆಶೀರ್ವಾದ ಪಡೆಯಲು ಬಿಳಿ ವಸ್ತುಗಳನ್ನು (ಅಕ್ಕಿ, ಹಾಲು, ಬಿಳಿ ಬಟ್ಟೆ ಇತ್ಯಾದಿ) ಖರೀದಿಸುವುದನ್ನು ಅತ್ಯಂತ ಮಂಗಳಕರ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.
ಪ್ರದೋಷ ವ್ರತದ ದಿನ ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಕೂಡ ತುಂಬಾ ಮಂಗಳಕರ. ಈ ದಿನ ಕಬ್ಬಿಣದ ಪಾತ್ರೆಗಳನ್ನು ಅಥವಾ ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಮೃದ್ದಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಪ್ರದೋಷ ವ್ರತಾಚರಣೆಯ ದಿನ ಮನೆಗೆ ಅಕ್ವೇರಿಯಂ ತರುವುದನ್ನು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ವೇರಿಯಂ ಖರೀದಿಸಿ ಅದರಲ್ಲಿ ಮೀನು ಇಡುವುದರಿಂದ ಗ್ರಹದೋಷಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.