Pranitha Subhash: ಟರ್ಕಿಯಲ್ಲಿ ಸ್ವಿಮ್‌ ಸೂಟ್ ಧರಿಸಿ ಪೋಸ್‌ ನೀಡಿದ ಪೂರ್ಕಿ ಸುಂದರಿ!

Sun, 07 Jan 2024-11:08 am,

 ಪೊರ್ಕಿ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಪ್ರಣೀತಾ ಸುಭಾಷ್ ಸದ್ಯ ತಾಯ್ತನವನ್ನು ಆನಂದಿಸುವುದರ ಜೊತೆಗೆ ಟರ್ಕಿಯಲ್ಲಿ ಪ್ರವಾಸವನ್ನು ಏಂಜಾಯ್ ಮಾಡುತ್ತಿದ್ದಾರೆ.

ನಟಿ ಪ್ರಣೀತಾ ಸುಭಾಷ್  ಒಂದು ಮಗುವಿನ ತಾಯಿಯಾದರೂ ತಮ್ಮ ಸೌಂದರ್ಯದ ಮೂಲಕ ಹೊಸ ನಟಿಯರನ್ನು ನಾಚಿಸುವಂತಿದ್ದಾರೆ. ಈಗ ಟರ್ಕಿಯಲ್ಲಿ ಕಡಲ ಕಿನಾರೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಪ್ರಣೀತಾ ಸುಭಾಷ್ ಫೋಟೋದಲ್ಲಿ ನೀಲಿ ಬಣ್ಣದ ಸ್ವಿಮ್ ಸೂಟ್ ಧರಿಸಿರುವುದನ್ನು ನೋಡಿ ಅಭಿಮಾನಿಗಳು ಶಾಕ್ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಪ್ರಣೀತಾ ಟರ್ಕಿಯ ಬೋಡ್ರಮ್‌ನಲ್ಲಿರುವ ರಮಣೀಯ ಬೀಚ್‌ನ ಮೇಲಿರುವ ಐಷಾರಾಮಿ ಈಜುಕೊಳದ ಪಕ್ಕದಲ್ಲಿ ನಿಂತು, ನೀಲಿ ಬಣ್ಣದ ಸ್ವಿಮ್ ಸೂಟ್ ಮೇಲೆ ಸುಂದರವಾದ ನೀಲಿ ಟೋಪಿಯನ್ನು ಹಾಕಿ ಪಕ್ಕಕ್ಕೆ ತಿರುಗಿ ಅಂದವಾಗಿ ಫೋಟೋಗೆ ಫೋಸ್ ನೀಡಿದ್ದಾರೆ.

ನಟಿ ಪ್ರಣೀತಾ ಸುಭಾಷ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸಿದ್ದಾರೆ. 'ತುಂಬಾ ಹಾಟ್ ಆದರೆ ಫುಲ್ ಫೋಟೋ ಮಿಸ್ ಆಗಿದೆ'.. 'ವಾಹ್, ನೀವು ಯಾವಾಗಲೂ ಮತ್ತು ಎಂದೆಂದಿಗೂ ತುಂಬಾ ಸುಂದರವಾಗಿ ಕಾಣುತ್ತೀರಿ'... 'ಹಬೀಬಿ ಭಾರತಕ್ಕೆ ಬನ್ನಿ'... 'ದಯವಿಟ್ಟು ಟರ್ಕಿಗೆ ಹೋಗಬೇಡಿ, ಅದು ಶತ್ರು ದೇಶ'... 'ಚೆನ್ನಾಗಿದ್ದಲಮ್ಮ ಯಾಕ ಬೇಕು ಚಡ್ಡಿ ಅವತಾರ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಟಿ ಪ್ರಣೀತಾ ಸುಭಾಷ್ ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದೇ, ಮದುವೆ ಬಳಿಕ ಸಂಸಾರ, ಮಗು ಎನ್ನುತ್ತಾ ದಿನ ಕಳೆಯುತ್ತಿರುವರು, ತಮ್ಮ ಸನಾತನ ಧರ್ಮದ ಬಗ್ಗೆ ತಮ್ಮ ಹೇಳಿಕೆಗಳು ಮತ್ತು ಪೂಜೆ, ಪುನಸ್ಕಾರಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. 

ಹಲವು ವರ್ಷಗಳಿಂದ ನಟನೆಯಿಂದ ಬ್ರೇಕ್ ಪಡೆದಿರುವ ನಟಿ ಪ್ರಣೀತಾ ನಟನೆಯ ರಾಮನ ಅವತಾರ ಸಿನಿಮಾ ಘೋಷಣೆಯಾಗಿದ್ದು, ಇದರಲ್ಲಿ ನಟ ರಿಷಿ  ಜೊತೆಗೆ ನಟಿಸುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link