ಮದ್ವೆಗೂ ಮುನ್ನ 34 ಮಕ್ಕಳಿಗೆ ತಾಯಿಯಾದ ಈಕೆ ಇಂದು ಶ್ರೀಮಂತ IPL ತಂಡವೊಂದರ ಒಡತಿ! 49 ವರ್ಷ ವಯಸ್ಸಿನ ಆ ಬ್ಯೂಟಿ ಯಾರು ಗೊತ್ತಾ?
ಬಬ್ಲಿ ಸ್ವಭಾವ ಮತ್ತು ಲವಲವಿಕೆ ತುಂಬಿದ ಮುಖ ಈ ನಟಿಯದ್ದು. ಅಂದಹಾಗೆ ಈಕೆ ಮದುವೆಗೆ ಮುಂಚೆಯೇ ಸುಮಾರು 36 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ಮಹಾಮಹಿಳೆ ಈಕೆ ಎಂದರೆ ತಪ್ಪಾಗಲ್ಲ.
ಅಂದಹಾಗೆ ನಾವಿಂದು ಡಿಂಪಲ್ ಹುಡುಗಿ ಪ್ರೀತಿ ಜಿಂಟಾ ಬಗ್ಗೆ ಮಾತನಾಡುತ್ತಿದ್ದೇವೆ. ಉದ್ಯಮಿ ಜೀನ್ ಗುಡೆನಾಫ್ ಜೊತೆ ಮದುವೆಯಾದ ಬಳಿಕ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿಯಾದರು. ಆದರೆ ಮದುವೆಗೂ ಮುನ್ನ ಅನಾಥ ಹಾಗೂ ಬಡ 34 ಮಕ್ಕಳ ಜವಾಬ್ದಾರಿಯನ್ನು ತಾಯಿ ಸ್ಥಾನದಲ್ಲಿ ನಿಂತು ನಿಭಾಯಿಸುತ್ತಿದ್ದರು ಪ್ರೀತಿ.
ಸಿನಿಮಾಗಳ ಜೊತೆಗೆ ಪ್ರೀತಿ ಜಿಂಟಾ ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಉದಾತ್ತ ಕೆಲಸಗಳಲ್ಲಿ ಅನೇಕ ಸಂಸ್ಥೆಗಳ ಪಾಲುದಾರರಾಗಿದ್ದಾರೆ. ವರದಿಗಳ ಪ್ರಕಾರ, ವರ್ಷಗಳ ಹಿಂದೆ ತಾನು ದತ್ತು ಪಡೆದ 34 ಮಕ್ಕಳ ವಸತಿ, ಆಹಾರ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ಅಗತ್ಯತೆಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.
ಸದಾ ನಗುಮುಖದಲ್ಲೇ ಇರುವ ಪ್ರೀತಿ ಜಿಂಟಾ, ತನ್ನ ಹದಿಹರೆಯದಲ್ಲಿ ಎದುರಿಸಿದ ನೋವುಗಳನ್ನೂ ಎಂದೂ ತೋರ್ಪಡಿಸಿದವರಲ್ಲ. ಕೇವಲ 13 ವರ್ಷದವರಿದ್ದಾಗ, ತಂದೆಯ ನೆರಳೇ ಮರೆಯಾಯಿತು. ಅದಾದ ಎರಡು ವರ್ಷಗಳ ನಂತರ ತಾಯಿಯೂ ತೀರಿಹೋದರು.
ತಂದೆ-ತಾಯಿ ಇಲ್ಲದ ಜೀವನ ಎಷ್ಟು ಕಷ್ಟ ಎಂದು ಅರಿತ ಪ್ರೀತಿ, ಇದೀಗ ಅನಾಥ ಮಕ್ಕಳ ನೋವಿಗೆ ನೆರಳಾಗಿದ್ದಾರೆ. ಇನ್ನು 49 ವರ್ಷದ ಪ್ರೀತಿ ಜಿಂಟಾ ಆ ಮಕ್ಕಳಿಗೆ ಹತ್ತಿರವಾಗಿದ್ದಾರೆ.
ಐಪಿಎಲ್ ತಂಡದ 'ಪಂಜಾಬ್ ನ್ಯಾಷನಲ್ ಬ್ಯಾಂಕ್' ಫ್ರಾಂಚೈಸಿಯಲ್ಲಿ ಪ್ರೀತಿ ಜಿಂಟಾ ಪಾಲು ಹೊಂದಿದ್ದಾರೆ.