ಮನೆಯಲ್ಲಿಯೇ ಸಿಗುವ ಈ ಪದಾರ್ಥಗಳನ್ನು ಬಳಸಿ ಗೋಲ್ಡ್ ಫೇಶಿಯಲ್ ತಯಾರಿಸಿ..?
ದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಈ ಫೇಶಿಯಲ್ ತಯಾರಿಸಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ...
ಮಸಾಜ್ ಹಾಗೂ ಫೇಶಿಯಲ್ ತ್ವಚೆಯನ್ನು ಕಾಂತಿಯುತಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ಮಾಡುವುದರಂದ ಕಲೆಗಳು ಮಾಯವಾಗುತ್ತವದೆ. ಈ ಫೇಶಿಯಲ್‌ಗಳು ಮುಖದ ಮೇಲಿನ ಸೂಕ್ಷ್ಮ ರೇಖೆಗಳು, ಕಲೆಗಳು ಮತ್ತು ಕಲೆಗಳಂತಹ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಪಾರ್ಲರ್‌ಗಳು ಫೇಶಿಯಲ್‌ಗೆ ಹೆಚ್ಚು ಹಣ ಪೀಕುತ್ತಾರೆ. ಕೆಮಿಕಲ್ಸ್‌ನಿಂದ ತಯಾರಾದ ಫೇಶಿಯಲ್ ಪ್ಯಾಕ್‌ಗಳಾಗಿದ್ದರೆ ಇದು ತ್ವಚೆಗೂ ಹಾನಿಕಾರಕ.
ಅಂದವನ್ನು ಕಾಪಾಡಿಕೊಳ್ಳಲು ಪಾರ್ಲರ್‌ಗೆ ಹೋಗಿ ಹಣ ಖರ್ಚು ಮಾಡಲೇ ಬೇಕೆಂಬ ಅಗತ್ಯವಿಲ್ಲ. ದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ತಯಾರಿಸಬಹುದು. ಅಷ್ಟೇ ಅಲ್ಲ ಈ ಫೇಶಿಯಲ್‌ನ ವಿಶೇಷತೆ ಏನು ಎಂದರೆ ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದರ್ಥಗಳನ್ನು ಬಳಿಸಿ ಈ ಫೇಸ್ ಮಾಸ್ಕ್ ಅನ್ನು ತಯಾರಿಸಿಬಹುದು. ಚರ್ಮದ ಅಲರ್ಜಿ ಮತ್ತು ಕಲೆಗಳನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ. ಹಾಗಾದರೆ ಮನೆಯಲ್ಲಿ ಕುಳಿತು ದುಬಾರಿ ಬೆಲೆಯ ಗೋಲ್ಡನ್ ಫೇಶಿಯಲ್ ಮಾಡುವುದು ಹೇಗೆ?
ಗೋಲ್ಡ್ ಫೇಶಿಯಲ್ ಮಾಡಲು ಮೊದಲು ಫೇಸ್ ಕ್ಲೆನ್ಸಿಂಗ್ ಮೂಲಕ ಪ್ರಾರಂಭಿಸಬೇಕು. ಮೊದಲು ಒಂದು ಬಟ್ಟಲಿನಲ್ಲಿ 4 ಚಮಚ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಅದ್ದಿ, ಹತ್ತಿಯನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 1 ನಿಮಿಷ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ.
ಮುಖವನ್ನು ಸ್ವಚ್ಛಗೊಳಿಸಿದ ನಂತರ ಸ್ಟೀಮ್ ತೆಗೆದುಕೊಳ್ಳಿ. ಮುಖವನ್ನು 2 ನಿಮಿಷಗಳ ಕಾಲ ಸ್ಟೀಮ್ ಮಾಡಿ . ಹೀಗೆ ಮಾಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಇದಾದ ನಂತರ ಟವೆಲ್ ನಿಂದ ಮುಖ ಮತ್ತು ಕುತ್ತಿಗೆಯನ್ನು ಒರೆಸಿದರೆ ಕೊಳೆ ಮತ್ತು ಸತ್ತ ಜೀವಕೋಶಗಳು ರಿಮೂವ್ ಆಗುತ್ತದೆ.
ನಂತರ ಫೇಸ್ ಸ್ಕ್ರಬ್ ಮಾಡಿ. ಇದಕ್ಕೆ ಒಂದು ಬೌಲ್‌ನಲ್ಲಿ ಸಕ್ಕರೆ ಹಾಕಿ ಅದಕ್ಕೆ ನಿಂಬೆ ಹಣ್ಣು ರಸ ಸೇರಿಸಿ ಹಾಗೂ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ ಮಸಾಜ್ ಮಾಡಿ. ತಣ್ಣೀರಿನಿಂದ ಮುಖ ತೊಳೆಯಿರಿ.
ಫೇಸ್ ಮಾಸ್ಕ್ ತಯಾರಿಸಲು ಒಂದು ಬಟ್ಟಲಿನಲ್ಲಿ ಕಾಲು ಚಮಚ ಅರಿಶಿನ, ಎರಡು ಚಮಚ ಕಡಲೇ ಹಿಟ್ಟು, 2 ಚಮಚ ಹಾಲು, 1 ಚಮಚ ರೋಸ್ ವಾಟರ್ ಮತ್ತು 1 ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಇ ಮುಖಕ್ಕೆ ಹಚ್ಚಿ. 10 ನಿಮಿಷಗಳ ನಂತರ ಮುಖವನ್ನು ತಣ್ಣಿರಿನಿಂದ ತೊಳೆಯಿರಿ. ಈ ಮೂಲಕ ನೀವು ಪಾರ್ಲರ್‌ನಂತಹ ಫೇಶಿಯಲ್ ಗ್ಲೋ ಮನೆಯಲ್ಲಿಯೇ ಪಡೆಯಬಹುದು.