ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯನಟಿ ಪ್ರಿಯಾಂಕಾ ಕಾಮತ್!
ಮಜಾಭಾರತ, ಗಿಚ್ಚಿ ಗಿಲಿಗಿಲಿ ನಟಿ ಪ್ರಿಯಾಂಕಾ ಕಾಮತ್ ಅಮಿತ್ ನಾಯಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ ಮಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಈ ನವಜೋಡಿಗೆ ಕಿರುತೆರೆ ನಟ-ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.
ಕಳೆದ ಎರಡು ದಿನಗಳಿಂದ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ಮದುವೆ ಕುರಿತ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಹಾಸ್ಯನಟಿ ಪ್ರಿಯಾಂಕಾ ಕಾಲಿಟ್ಟಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಅಮಿತ್- ಪ್ರಿಯಾಂಕಾ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದವರು, ಅದಾದ ನಂತರದಲ್ಲಿ ಏಳು-ಬೀಳಿನಲ್ಲಿ ಇವರಿಬ್ಬರು ಒಟ್ಟಿಗೆ ಸಾಥ್ ನೀಡಿದ್ದರು.
ನಟಿ ಪ್ರಿಯಾಂಕಾ ಪತಿ ಅಮಿತ್ ನಾಯಕ್ ಮೂಲತಃ ಕುಂದಾಪುರದವರಾಗಿದ್ದವರು, ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.
ನಟಿ ಪ್ರಿಯಾಂಕಾ ಮೂಲತಃ ಮಂಗಳೂರಿನವರಾಗಿದ್ದು, ಅನಾರೋಗ್ಯದ ಸಮಸ್ಯೆಯಿಂದಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗ ಅಮಿತ್ ಅವರು ಪ್ರಿಯಾಂಕಾ ನೆರವಿಗೆ ನಿಂತು ಸಂಗಾತಿಯ ಆರೈಕೆ ಮಾಡಿದ್ದರು