ಮಧುಮೇಹ, ತೂಕ ನಷ್ಟ ಎರಡಕ್ಕೂ ಇದೊಂದೇ ಮದ್ದು, ಇಲ್ಲಿದೆ ಇದನ್ನು ಬಳಸುವ ಸರಿಯಾದ ವಿಧಾನ
ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ಮೆಂತ್ಯ ಕಾಳುಗಳು ಆರೋಗ್ಯದ ಆಗರ. ಇದರಲ್ಲಿ ಕರಗುವ ಫೈಬರ್ ಸಮೃದ್ಧವಾಗಿದ್ದು, ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
ಮೆಂತ್ಯ ಕಾಳುಗಳನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ತೂಕನಷ್ಟ, ಮಧುಮೇಹ ಎರಡನ್ನೂ ಸರಿಯರಿ ನಿರ್ವಹಿಸಬಹುದು ಎನ್ನಲಾಗುತ್ತದೆ. ಅಂತಹ ವಿಧಾನಗಳೆಂದರೆ...
ಒಂದು ಸ್ಪೂನ್ ಮೆಂತ್ಯೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸುವುದರಿಂದ ಇದು ಬ್ಲಡ್ ಶುಗರ್ ನಿಯಂತ್ರಿಸಿ, ತೂಕ ನಷ್ಟವನ್ನು ಪ್ರಚೋಧಿಸುತ್ತದೆ.
ನಿತ್ಯ ಒಂದೆರಡು ಕಪ್ ಮೆಂತ್ಯ ಟೀ ಕುಡಿಯುವುದು ಕೂಡ ಮಧುಮೇಹ ನಿಯಂತ್ರಣ, ಜೊತೆಗೆ ಆರೋಗ್ಯಕರವಾಗಿ ತೂಕ ಇಳಿಸಲು ಕೂಡ ಸಹಕಾರಿ.
ಮೆಂತ್ಯ ಕಾಳುಗಳು ಮೊಳಕೆಯೊಡೆಯುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ವೃದ್ಧಿಯಾಗುತ್ತದೆ. ಇದನ್ನು ಲಘು ಆಹಾರವಾಗಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.
ಮೆಂತ್ಯ ಕಾಳುಗಳನ್ನು ಪುಡಿ ಮಾಡಿ ಅದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೂಪ್ ಅಥವಾ ಸ್ಮೂಥಿಯಾಗಿ ಸೇವಿಸುವುದು ಮಧುಮೇಹ, ತೂಕ ಇಳಿಕೆಗೆ ಅತ್ಯುತ್ತಮ ಮನೆಮದ್ದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.