ರೇಣುಕಾಸ್ವಾಮಿ ಪರ ಪಿ ಪ್ರಸನ್ನ ಕುಮಾರ್ ವಾದ: ಈ ಪಬ್ಲಿಕ್ ಪ್ರಾಸಿಕ್ಯೂಟರ್ ಹಿನ್ನೆಲೆ ಕೇಳಿ ದರ್ಶನ್’ಗೆ ಶುರುವಾಯ್ತು ನಡುಕ! ಅಷ್ಟಕ್ಕೂ ಅವರ್ಯಾರು?
ರೇಣುಕಾಸ್ವಾಮಿ ಕಿಡ್ನಾಪ್ ಆಂಡ್ ಮರ್ಡರ್ ಪ್ರಕರಣದಲ್ಲಿ ನಟ ದರ್ಶನ್, ಆಪ್ತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಬಗೆದಷ್ಟು ಸತ್ಯ ಬಯಲಾಗತ್ತಿದ್ದು, ಈ ಮಧ್ಯೆ ಪೊಲೀಸ್ ವಶದಲ್ಲಿರುವ ದರ್ಶನ್’ಗೆ ನಡುಕ ಶುರುವಾಗಿದೆ. ಇದಕ್ಕೆ ಕಾರಣ ರೇಣುಕಾಸ್ವಾಮಿ ಪರ ವಾದ ಮಂಡಿಸಲು ಮುಂದಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ವಾದ ಮಾಡಲು ವಿಶೇಷ ಅಭಿಯೋಜಕರನ್ನಾಗಿ (SPP) ದಕ್ಷ ಹಿರಿಯ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಸುದ್ದಿ ತಿಳಿದ ದರ್ಶನ್’ಗೆ ಭಯ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಹತ್ಯೆಗೀಡಾದ ರೇಣುಕಾಸ್ವಾಮಿ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಾಡಲಿದ್ದಾರೆ. ಅಂದಹಾಗೆ ಇವರ ಹಿನ್ನೆಲೆ ಸಾಮಾನ್ಯದ್ದೇನಲ್ಲ.
ಪ್ರಸ್ತುತ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದ ಕೆಲವು ಘಟನೆಗಳಲ್ಲಿ ವಿಶೇಷ ಅಭಿಯೋಜಕರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ SPP ಆಗಿ ಸರ್ಕಾರದಿಂದಲೇ ನೇಮಕವಾಗಿದ್ದಾರೆ.
ಕೊಲೆಯಾದ ರೇಣುಕಾಸ್ವಾಮಿ ಪರ ಯಾರೊಬ್ಬರು ವಾದ ಮಾಡಲು ಮುಂದಾಗದಿದ್ದಾಗ, ರಾಜ್ಯ ಸರ್ಕಾರವೇ ಖುದ್ದಾಗಿ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿದೆ.