ವಾರದಲ್ಲಿ ಈ ನಾಲ್ಕು ದಿನದಂದೆ ಚಿನ್ನ ಕರೀದಿಸಿ! ಇದರಿಂದ ದುಪ್ಪಟ್ಟಾಗಲಿದೆ ನಿಮ್ಮ ಅದೃಷ್ಟ
ಸಾಮಾನ್ಯವಾಗಿ ಜನರು ಚಿನ್ನ ಕರೀದಿಸುವಾಗ, ಆಭರಣ ಕರೀದಿಸಲು ಸೂಕ್ತ ದಿನ ಯಾವುದು ಎಂದು ಗಮನಿಸುವುದಿಲ್ಲ. ಆದರೆ, ನೀವು ಹೀಗೆ ಮಾಡುವುದು ತಪ್ಪು. ಶಾಸ್ತ್ರದ ಪ್ರಕಾರ ವಾರದ ಈ ನಾಲ್ಕು ದಿನದಲ್ಲಿ ಚಿನ್ನ ಕರೀದಿಸುವುದರಿಂದ ನಿಮ್ಮ ಅದೃಷ್ಟ ದುಪ್ಪಟ್ಟಾಗುತ್ತದೆಯಂತೆ. ಹಾಗಾದರೆ ಆ ನಾಲ್ಕು ದಿನ ಯಾವುದು? ತಿಳಿಯಲು ಮುಂದೆ ಓದಿ...
ಭಾರತದಲ್ಲಿ ಚಿನ್ನಾಭರಣಕ್ಕೆ ಬಾರಿ ಬೇಡಿಕೆ ಇದೆ. ಈ ಚಿನ್ನವನ್ನು ಕೇವಲ ಹೂಡಿಕೆ ಸಂಪತ್ತು ಅಷ್ಟೆ ಅಲ್ಲದೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ.
ಹಿಂದೂ ಧರ್ಮದಲ್ಲಿ ಚಿನ್ನವನ್ನು ಮಂಗಳಕರ ಲೋಹವೆಂದು ಪರಿಗಣಿಸಲಾಗಿದೆ. ಹಾಗಾಗಿ ಖರೀದಿಸುವಾಗ ಶುಭ, ಅಶುಭ ದಿನಗಳನ್ನು ನೋಡಿಕೊಂಡು ಖರೀದಿಸಬೇಕು. ಆದ್ದರಿಂದ, ಅಕ್ಷಯ ತೀರ್ಥಿಯಂತಹ ಮಂಗಳಕರ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ಚಿನ್ನವನ್ನು ಗುಣಿಸುತ್ತದೆ ಎಂದು ನಂಬಲಾಗಿದೆ.
ಈ ರೀತಿಯಾಗಿ, ವಾರದ ಯಾವುದೇ ದಿನದಂದು ಚಿನ್ನವನ್ನು ಖರೀದಿಸುವುದು ಅದೃಷ್ಟ ಮತ್ತು ದುರದೃಷ್ಟವನ್ನು ಹೊತ್ತು ತರುತ್ತದೆ.
ನೀವು ಸೋಮವಾರ, ಮಂಗಳವಾರ, ಗುರುವಾರ ಮತ್ತು ಭಾನುವಾರವನ್ನು ಚಿನ್ನವನ್ನು ಖರೀದಿಸಲು ಉತ್ತಮ ದಿನವಾಗಿದ್ದು, ಈ ವಾರದ ದಿನಗಳಲ್ಲಿ ನೀವು ಚಿನ್ನ ಕರೀದಿಸಿದಿರೆ, ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
ಪೂಸಾ ನಕ್ಷತ್ರದಲ್ಲಿ ಚಿನ್ನ ಖರೀದಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಇದೆ.
ಚಿನ್ನವು ಸೂರ್ಯಗ್ರಹದ ಸಂಕೇತವಾಗಿದೆ ಆದ್ದರಿಂದ ಶನಿವಾರದಂದು ಸೂರ್ಯ ಮತ್ತು ಶನಿಯ ನಡುವೆ ದ್ವೇಷವಿರುವುದರಿಂದ ಚಿನ್ನವನ್ನು ಖರೀದಿಸಬೇಡಿ. ಒಂದು ವೇಳೆ ನೀವು ಶನಿವಾರದಂದು ಚಿನ್ನವನ್ನು ಕರೀದಿಸಿದರೆ, ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶನಿ ದೇವರು ಕೋಪಗೊಳ್ಳುತ್ತಾರೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)