ತಲೆದಿಂಬಿನ ಕೆಳಗೆ ಈ ವಸ್ತುವನ್ನಿಟ್ಟು ಮಲಗಿ... ರಾತ್ರಿ ವೇಳೆ ಕೆಟ್ಟ ಕನಸುಗಳು ಬೀಳಲ್ಲ; ಸುಖ ನಿದ್ರೆ ನಿಮ್ಮದಾಗುವುದು

Thu, 26 Sep 2024-8:36 pm,

ಸಮಯವಿರಲಿ ಇಲ್ಲದಿರಲಿ... ಆರೋಗ್ಯದ ಬಗ್ಗೆ ಗಮನ ಕೊಡುವುದು ಮುಖ್ಯ. ಅದರಲ್ಲೂ ಆಹಾರ ಮತ್ತು ನಿದ್ದೆ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ನೀಡುವ ಪ್ರಮುಖ ಅಂಶಗಳು.

 

ಆದರೆ ಕೆಲ ಸಂದರ್ಭದಲ್ಲಿ ಕೆಟ್ಟ ಕನಸುಗಳಿಂದಾಗಿ ಸರಿಯಾದ ನಿದ್ದೆ ಪಡೆಯಲು ಸಾಧ್ಯವಾಗುವುದಿಲ್ಲ. ಮನಸ್ಸಲ್ಲಿ ಗೊಂದಲ ಮೂಡುವುದಷ್ಟೇ ಅಲ್ಲದೆ,  ನಿದ್ದೆ ಮಾಡಲು ಭಯ ಹುಟ್ಟಿಸುವಂತೆ ಮಾಡುತ್ತವೆ. ಹೀಗಿರುವಾಗ ಕೆಲ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಕೆಟ್ಟ ಕನಸುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

 

ನಾಣ್ಯವು ಉತ್ತಮ ಆರ್ಥಿಕ ಸ್ಥಿತಿ ಮತ್ತು ಆರೋಗ್ಯದೊಂದಿಗೆ ಸಂಬಂಧಿಸಿದೆ. ಮಲಗುವ ಮೊದಲು ತಲೆದಿಂಬಿನ ಅಡಿಯಲ್ಲಿ ನಾಣ್ಯವನ್ನು ಇಟ್ಟರೆ ಕೆಟ್ಟ ಕನಸುಗಳು ಬೀಳಲ್ಲ. ಅಷ್ಟೇ ಅಲ್ಲದೆ, ಇದು ಅದೃಷ್ಟವನ್ನು ಆಕರ್ಷಿಸುತ್ತದೆ.

 

ಇನ್ನು ಒತ್ತಡದಿಂದಾಗಿ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ನಿಮ್ಮ ದಿಂಬಿನ ಕೆಳಗೆ ಲೋಹದ ಚಾಕು ಅಥವಾ ಕತ್ತರಿಗಳನ್ನು ಇಟ್ಟುಕೊಳ್ಳಬಹುದು. ಇದು ಮಾನಸಿಕ ಶಾಂತಿಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ಎಚ್ಚರಿಕೆಯಿಂದ ಇಡಿ.

 

ಇನ್ನು ತಲೆದಿಂಬಿನ ಪಕ್ಕ ಪರಿಮಳಯುಕ್ತ ವಸ್ತುಗಳನ್ನು ಇಟ್ಟರೆ ಕೂಡ ಚೆನ್ನಾಗಿ ನಿದ್ರೆ ಬರುತ್ತದೆ. ಅಂದರೆ ಇದು ಇಂದ್ರಿಯಗಳನ್ನು ಶಾಂತಗೊಳಿಸಲು ಮತ್ತು  ಆನಂದವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

 

ಹಿಂದೂ ಮಹಾಕಾವ್ಯ 'ಭಗವದ್ಗೀತೆ' ಶ್ರೀಕೃಷ್ಣನ ಭಕ್ತರು ಪಾಲಿಸುವ ಪವಿತ್ರ ಪುಸ್ತಕವಾಗಿದೆ. ಇದು ಕಷ್ಟದ ಸಮಯದಲ್ಲಿ ಮಾರ್ಗದರ್ಶನ ನೀಡುವುದಲ್ಲದೆ, ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಇದನ್ನು ಮಲಗುವಾಗ ದಿಂಬಿನ ಬಳಿ ಇಡಬಹುದು.

 

ವಾಸ್ತು ಶಾಸ್ತ್ರದ ಪ್ರಕಾರ, ಏಲಕ್ಕಿ ಅಥವಾ ಹಸಿರು ಮೆಣಸಿನಕಾಯಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡರೆ, ನಿದ್ರಾದೇವಿ ಚೆನ್ನಾಗಿ ಆವರಿಸುತ್ತಾಳೆ ಎಂದು ಹೇಳಲಾಗುತ್ತದೆ.

 

ಮಲಗುವ ಮುನ್ನ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡರೆ ಕೆಟ್ಟ ಕನಸು ಬೀಳುವುದಿಲ್ಲ. ಅಷ್ಟೇ ಅಲ್ಲದೆ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಶಾಂತ ನಿದ್ರೆಯನ್ನು ಉತ್ತೇಜಿಸುತ್ತದೆ.

 

 ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link