ಬಾಲ್ಯದ ಗೆಳತಿಯಲ್ಲಿಯೇ ಮೂಡಿದ ಪ್ರೇಮ !ಯಾವ ಬಾಲಿವುಡ್ ಸಿನಿಮಾಗೂ ಕಡಿಮೆಯಲ್ಲ ಆರ್.ಅಶ್ವಿನ್ ಲವ್ ಸ್ಟೋರಿ !ಸದಾ ಬೆಂಬಲವಾಗಿ ನಿಂತಿದ್ದ ಮುದ್ದು ಮಡದಿ ಇವರೇ !

Wed, 18 Dec 2024-12:58 pm,

ಭಾರತ ಕ್ರಿಕೆಟ್ ನಲ್ಲಿ ಬಹು ಮುಖ್ಯ ಹೆಸರು ರವಿಚಂದ್ರನ್ ಅಶ್ವಿನ್. ಯಾರ ವೃತ್ತಿ ಬದುಕಿನಂತೆಯೇ ವೈಯಕ್ತಿಕ ಜೀವನ ಕೂಡಾ ರೋಮಾಂಚನಕಾರಿಯಾಗಿದೆ. ಈ ಟಾಲ್ ಡಾರ್ಕ್ ಹ್ಯಾಂಡ್ಸಂ ಹುಡುಕ ಅದೆಷ್ಟೋ ಹುಡುಗಿಯರ ಮನ ಗೆದ್ದಿದ್ದರಂತೆ. 

ಆದರೆ ಆರ್. ಅಶ್ವಿನ್ ಮನಸೋತದ್ದು ಮಾತ್ರ ತನ್ನ ಬಾಲ್ಯದ ಗೆಳತಿಗೆ. ಅಶ್ವಿನ್ ಪತ್ನಿ ಪೃಥಿ ನಾರಾಯಣನ್. ಇಬ್ಬರೂ ಬಾಲ್ಯದಿಂದಲೇ ಜೊತೆಯಾಗಿ ಓದಿ, ಆಡಿ ಬೆಳೆದವರು. ಇಬ್ಬರದ್ದೂ ಒಂದೇ ಶಾಲೆ.  

ಇವರಿಬ್ಬರ ನಡುವೆ ಕೆಮಿಸ್ಟ್ರಿ ಅದ್ಭುತವಾಗಿದೆ. ಇನ್ನು ಇವರ ಪ್ರೇಮಕತೆ ಯಾವ ಬಾಲಿವುಡ್ ಚಿತ್ರಕ್ಕಿಂತ ಕಡಿಮೆಯಿಲ್ಲ.

ಪೃಥಿಯನ್ನು ಅಶ್ವಿನ್ ಮೊದಲು ನೋಡಿದ್ದು ತನ್ನ ಶಾಲಾ ದಿನಗಳಲ್ಲಿ.  ಪೃಥಿಯ ಸರಳತೆ, ಸೌಂದರ್ಯ, ಗುಣ ಎಲ್ಲವೂ  ಅಶ್ವಿನ್  ಅವರನ್ನು ಆಕರ್ಷಿಸಿತ್ತು. ಆದರೆ ಈ ಬೆಸುಗೆ ಗಟ್ಟಿಯಾದದ್ದು ಇಬ್ಬರೂ ಒಂದೇ ಕಾಲೇಜಿಗೆ ಪ್ರವೇಶ ಪಡೆದ ಮೇಲೆ.

ಇವರಿಬ್ಬರ ಕುಟುಂಬಗಳು ಕೂಡಾ ಪರಸ್ಪರ ಪರಿಚಯವಿದ್ದ ಕಾರಣ ಇವರ ಪ್ರೇಮಕ್ಕೆ ಯಾರೂ ಅಡ್ಡಿಯಾಗಲಿಲ್ಲ. ಹಾಗಾಗಿ ಅಶ್ವಿನ್ ಮತ್ತು ಪೃಥಿ ಯಾವುದೇ ಅಂಜು ಅಳಕು ಇಲ್ಲದೆ ಡೇಟ್ ಮಾಡುತ್ತಿದ್ದರು. 

ಇನ್ನು ರವಿಚಂದ್ರನ್ ಅಶ್ವಿನ್ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೇಲೆ ಬಹಳ ಬ್ಯುಸಿಯಾಗಿ ಬಿಡುತ್ತಾರೆ. ದೀರ್ಘ ಕರೆಗಳು ಮತ್ ಡೇಟಿಂಗ್ ಇದ್ಯಾವುದಕ್ಕೂ ಸಮಯವಿಲ್ಲದೆ ಹೋಗುತ್ತದೆ. ಆದರೆ ಇದ್ಯಾವುದೂ ಅವರ ಪ್ರೀತಿಗೆ ಅಡೆತಡೆಯಾಗಲೇ ಇಲ್ಲ.   

2011 ರಲ್ಲಿ ಈ ಪ್ರೇಮ ಪಕ್ಷಿಗಳು ಅಂತಿಮವಾಗಿ ಸಪ್ತಪದಿ ತುಳಿಯುತ್ತಾರೆ. ನವೆಂಬರ್ 13, 2011 ರಂದು ತಮಿಳು ಸಂಪ್ರದಾಯದಂತೆ ಇವರಿಬ್ಬರ ಅದ್ಧೂರಿ ವಿವಾಹ ನಡೆಯುತ್ತದೆ.   

ಈ ದಂಪತಿಗೆ 2015 ರಲ್ಲಿ ಮುದ್ದಾದ ಹೆಣ್ಣು ಅಖಿರಾ ಜನನವಾಗುತ್ತದೆ. ಇದಾದ ಒಂದೇ  ವರ್ಷಕ್ಕೆ ಮತ್ತೊಂದು ಹೆಣ್ಣು ಮಗುವಿನ  (ಆದ್ಯ) ಪೋಷಕರಾದ ಸಂಭ್ರಮ ಈ ದಂಪತಿಯದ್ದಾಗುತ್ತದೆ. 

ಕ್ರಿಕೆಟ್ ವೇಳೆ ಅಶ್ವಿನ್ ಅವರನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಪೃಥ್ವಿ ಅಷ್ನ್ವಿನ್ ಪಾಲಿನ ಅದೃಷ್ಟ ದೇವತೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link