ಗರ್ಲ್ ಫ್ರೆಂಡ್ ಗೆ ಕ್ರಿಕೆಟ್ ಮೈದಾನದಲ್ಲಿಯೇ ಪ್ರೊಪೋಸ್ ಮಾಡಿದ್ದ ಆರ್ ಆಶ್ವಿನ್..!
ಭಾರತದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಅವರ ಪ್ರೇಮಕಥೆ ಶಾಲಾ ದಿನಗಳಲ್ಲಿ ಪ್ರಾರಂಭವಾಯಿತು,ಆರಂಭದಲ್ಲಿ ಪೃಥಿ ನಾರಾಯಣನ್ ಅವರ ಜೊತೆ ಸ್ನೇಹವಾಗಿ ನಂತರ ಪ್ರೀತಿಯಾಗಿ ಅರಳಿತು.
ಅವರ ಕಾಲೇಜು ದಿನಗಳಲ್ಲಿ ಅಶ್ವಿನ್ ಚೆಂಪ್ಲಾಸ್ಟ್ ಕ್ರಿಕೆಟ್ ಮೈದಾನದಲ್ಲಿ ಪೃಥಿಗೆ ಪ್ರಪೋಸ್ ಮಾಡಿದ್ದರು.
ಅಶ್ವಿನ್ ಮತ್ತು ಪೃಥಿ ಅವರ ಕುಟುಂಬಗಳು ಇಬ್ಬರ ನಿರ್ಧಾರಗಳನ್ನು ಬೆಂಬಲಿಸಿದರು
2011ರ ವಿಶ್ವಕಪ್‌ಗೆ ಮುನ್ನ ಅಶ್ವಿನ್ ಮತ್ತು ಪೃಥಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
2011 ರಲ್ಲಿ,ಇಬ್ಬರೂ ಸಾಂಪ್ರದಾಯಿಕ ತಮಿಳು ಪದ್ದತಿಯಂತೆ ಮದುವೆಯಾದರು.
2015 ಮತ್ತು 2016 ರಲ್ಲಿ, ಅಶ್ವಿನ್ ಮತ್ತು ಪೃಥಿ ಅವರು ತಮ್ಮ ಹೆಣ್ಣುಮಕ್ಕಳಾದ ಅಖಿರಾ ಮತ್ತು ಆಧ್ಯಾ ಅವರು ಜನಿಸಿದರು.
ಡಿಸೆಂಬರ್ 18 ರಂದು, ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು
ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ನಂತರ ಅವರು ನಿವೃತ್ತಿ ಘೋಷಿಸಿದರು.