R Ashwin : ಅಶ್ವಿನ್ ಸ್ಥಾನ ತುಂಬಲಿದ್ದಾನೆ 26 ವರ್ಷದ ಈ ಯುವ ಆಟಗಾರ..! ಟೀಂ ಇಂಡಿಯಾ ಬಲ ತಗ್ಗೊದೇ ಇಲ್ಲ.. ಗುರು..

Wed, 18 Dec 2024-3:46 pm,

ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಲ್ಲಿಯವರೆಗೆ ಅವರು 537 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.  

ಅಶ್ವಿನ್ ನಿವೃತ್ತಿ ಘೋಷಣೆಯೊಂದಿಗೆ ತಂಡದಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ..? ಎಂಬ ಊಹಾಪೋಹಗಳು ಹೆಚ್ಚಾಗಿವೆ. ಅಶ್ವಿನ್ 2012 ರಿಂದ ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿಲ್ಲ.  

ಇತ್ತೀಚೆಗಿನ ನ್ಯೂಜಿಲೆಂಡ್ ಸರಣಿಯಲ್ಲಿ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಟವಾಡಿದ್ದರು. ಮುಂದಿನ ದಿನಗಳಲ್ಲಿ ಅಶ್ವಿನ್ ಅವರ ಸ್ಥಾನವನ್ನು ಈ ಕೆಳಗಿನ 3 ಆಟಗಾರರು ತುಂಬಬಹುದು ಎನ್ನಲಾಗಿದೆ..   

ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅಶ್ವಿನ್ ಬದಲಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಸುಂದರ್ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನಾಡಿದ್ದು ಒಟ್ಟು 354 ರನ್ ಗಳಿಸಿ, 22 ವಿಕೆಟ್ ಪಡೆದಿದ್ದಾರೆ.  

ಕುಲದೀಪ್ ಯಾದವ್ ಇದುವರೆಗೆ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 5 ಬಾರಿ ವಿಕೆಟ್ ಪಡೆದಿದ್ದಾರೆ. ಮಾರ್ಚ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದಾರೆ.  

ಅಶ್ವಿನ್ ಬದಲಿಗೆ ತನುಷ್ ಕೊಟ್ಯಾನ್ ಅವರನ್ನು ಬಿಸಿಸಿಐ ಆಯ್ಕೆ ಮಾಡಬಹುದು. 26ರ ಹರೆಯದ ಈ ಯುವ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 101 ವಿಕೆಟ್‌ಗಳನ್ನು ಪಡೆದಿದ್ದಾರೆ. 2 ಶತಕ ಮತ್ತು 13 ಅರ್ಧಶತಕ ಸೇರಿದಂತೆ 1525 ರನ್ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link