PAK vs NZ: 4,4,4,4,4,4,4,4,4,4,4,4,4,4,6.. ಪಾಕ್ ಬೌಲರ್‌ಗಳ ನೀರಿಳಿಸಿದ ರಚಿನ್ ರವೀಂದ್ರ !
ರಚಿನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ರಚಿನ್ ರವೀಂದ್ರ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
89 ಬಾಲ್‌ಗಳಲ್ಲಿ ಶತಕ ಸಿಡಿಸಿದ ಗಳಿಸಿದ ರಚಿನ್ ರವೀಂದ್ರ, ಬರೋಬ್ಬರಿ 14 ಬೌಂಡರಿ, 1 ಸಿಕ್ಸರ್ ಬಾರಿಸಿದ್ದಾರೆ. ಪಾಕ್‌ನ ಪ್ರತಿಯೊಬ್ಬ ಬೌಲರ್‌ಗಳಿಗೂ ದುಸ್ವಪ್ನವಾಗಿ ಕಾಡಿದ್ದಾರೆ.
ಎಡಗೈ ಆಟಗಾರ ರಚಿನ್ ರವೀಂದ್ರ ಈ ಬಾರಿಯ ವಿಶ್ವಕಪ್‌ನಲ್ಲಿ ತನ್ನ ಭರ್ಜರಿ ಇನ್ನಿಂಗ್ಸ್ ಮೂಲಕ 500 ರನ್‌ಗಳ ಗಡಿ ದಾಟಿದರು.
ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ನಂತರ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ರನ್ ಗಳಿಸಿದ ಮೂರನೇ ಕಿವೀ ಬ್ಯಾಟರ್ ಎನಿಸಿಕೊಂಡರು ರಚಿನ್ ರವೀಂದ್ರ.
ಅವರು 36ನೇ ಓವರ್‌ನಲ್ಲಿ ಮೊಹಮ್ಮದ್ ವಾಸಿಮ್ ಜೂನಿಯರ್ ಬೌಲ್‌ಗೆ 108 ರನ್ ಗಳಿಸಿ ಔಟಾದರು. ಈಗ ಈ ವಿಶ್ವಕಪ್‌ನಲ್ಲಿ 523 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 545 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.