ಕೆತ್ತಿದ ಶಿಲ್ಪದಂತೆ ಕಂಡ ರಾಧಿಕಾ ಮರ್ಚೆಂಟ್‌..! ಲೆಹಂಗಾ ಧರಿಸಿ ರಾಣಿಯಂತೆ ಮೆರೆದ ಅಂಬಾನಿ ಸೊಸೆ

Sat, 13 Jul 2024-8:45 am,

ರಾಧಿಕಾ ಮರ್ಚೆಂಟ್ ವಧುವಾಗಿ ಹೇಗೆ ಕಾಣಬಹುಸು ಎಂಬ ಕ್ಷಣಕ್ಕೆ ಎಲ್ಲರೂ ಕಾಯುತ್ತಿದ್ದರು. ಮದುವೆಯ ಪೂರ್ವ ಸಮಾರಂಭಗಳಲ್ಲಿ ಮತ್ತು ಸಾಂಪ್ರದಾಯಿಕ ವಿವಾಹ ಪೂರ್ವ ಸಮಾರಂಭಗಳಲ್ಲಿ ತನ್ನ ಸ್ಟೈಲಿಂಗ್‌ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದ ರಾಧಿಕ ಮರ್ಚೆಂಟ್‌ ಸಪ್ತಪದಿ ತುಳಿಯುವ ದಿನ ಹೇಗೆ ಕಾಣುತ್ತಾಳೆ ಎನ್ನುವ ಕಾತುರ ಎಲ್ಲರದ್ದು.   

ಈ ಮೋಹನಾಂಗಿ ಮದುಮಗಳಾದಾಗ ಎಷ್ಟು ಚೆನ್ನಾಗಿರುತ್ತಾಳೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಅಂತಿಮವಾಗಿ, ಅವರ ಸ್ಟೈಲಿಸ್ಟ್ ರಿಯಾ ಕಪೂರ್ ವಧುವಿನ ಗೆಟಪ್‌ನಲ್ಲಿರುವ ರಾಧಿಕಾ ಮರ್ಚೆಂಟ್ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಅಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಯಾ, ರಾಧಿಕಾ ಫೋಟೊಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ರಾಧಿಕಾ ಲುಕ್‌ ನೋಡಿ ಫಿದಾ ಆಗಿದ್ದಾರೆ.  

ವಧು ರಾಧಿಕಾಳ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು, ಕೆತ್ತಿದ ಶಿಲ್ಪದಂತೆ ಕಾಣುತ್ತಿರುವ ರಾಧಿಕಾ. ಕೆಂಪು ಮತ್ತು ಬಿಳಿ ಲೆಹೆಂಗಾದಲ್ಲಿ ಕಾಂತಿಯುತವಾಗಿ ಕಾಣುತ್ತಿದ್ದರು. ಡಬಲ್ ದುಪಟ್ಟಾವನ್ನು ಧರಿಸಿ, ಹಸಿರು ಡೈಮೆಂಡ್ಸ್‌ನಿಂದ ಹೊದಿಸಿದ ನೆಕ್ ಲೇಸ್ ಅನ್ನು ಕುತ್ತಿಗೆಗೆ ಧರಿಸಿ ರಾಣಿಯಂತೆ ಕಂಡರು.   

ರಾಧಿಕಾ ಮರ್ಚೆಂಟ್ ಅವರು ಅನಂತ್ ಅಂಬಾನಿ ಅವರೊಂದಿಗಿನ ವಿವಾಹ ಸಮಾರಂಭಕ್ಕಾಗಿ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಉಡುಪನ್ನು ಧರಿಸಿದ್ದರು . ಗುಜರಾತಿ ಸಂಪ್ರದಾಯದಂತೆ ಕೆಂಪು ಮತ್ತು ಬಿಳಿ ಬಣ್ಣದ ಸಂಯೋಜನೆಯೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.  

ಜರ್ದೋಸಿ ಕಟ್ ವರ್ಕ್ ಹೊಂದಿರುವ ಈ ಡಿಸೈನರ್ ಲೆಹೆಂಗಾ ಎರಡು ದುಪಟ್ಟಾಗಳನ್ನು ಹೊಂದಿದೆ. ತಲೆಯ ಮೇಲಿನ ದುಪ್ಪಟ್ಟ 5 ಮೀಟರ್ ಉದ್ದವಾಗಿದೆ. ಲೆಹೆಂಗಾ ಮೂರು ಕೆಂಪು ಬಣ್ಣದ ಬಾರ್ಡರ್ ವಿನ್ಯಾಸವನ್ನು ಹೊಂದಿದೆ. ಈ ಲೆಹೆಂಗಾ ನಕ್ಷಿ, ಜರ್ದೋಸಿ ಮತ್ತು ಸಾದಿ ಕೆಲಸದ ಮಿಶ್ರಣದೊಂದಿಗೆ ಹೂವಿನ ವಿನ್ಯಾಸಗಳನ್ನು ಒಳಗೊಂಡಿದೆ. ತಲೆಯ ಮೇಲೆ ಧರಿಸಿರುವ ದುಪ್ಪಟ್ಟ ಅತ್ಯಂತ ಸೂಕ್ಷ್ಮವಾದ ಅನುಕಂಪದಿಂದ ವಿನ್ಯಾಸಗೊಳಿಸಲಾಗಿದೆ. ಅದರೊಂದಿಗೆ 80 ಇಂಚು ಉದ್ದದ ಮತ್ತೊಂದು ದುಪಟ್ಟಾ ಕೂಡ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link