Radhika Pandit: ಪತಿ ಮತ್ತು ಮಕ್ಕಳೊಡನೆ ರಾಧಿಕಾ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್!
ಚಂದನವನದ ಕ್ಯೂಟ್ ಕಪಲ್‌ಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಇಬ್ಬರು ತಮ್ಮ ಮಕ್ಕಳೊಡನೆ ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಪತಿ ಯಶ್‌ಗೆ ಜೊತೆಗಿರುವ ಕಪಲ್ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ, ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಶುಭಾಶಯಗಳು ಎಂದು ತಿಳಿಸಿದ್ದಾರೆ.
ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳು ಹಾಗೂ ಗಂಡನ ಜೊತೆ ಪ್ರೇಮಿಗಳ ದಿನವನ್ನು ಆಚರಿಸಿಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದು, ಕ್ಯಾಪ್ಶನ್‌ನಲ್ಲಿ ನನ್ನ ವ್ಯಾಲೆಂಟೈನ್ಸ್ ಜೊತೆ ವ್ಯಾಲೆಂಟೈನ್ಸ್ ಡೇ ಲಂಚ್ ಎಂದು ಬರೆದಿದ್ದಾರೆ.
ನಟಿ ರಾಧಿಕಾ ಹಾಗೂ ಯಶ್ ಇಬ್ಬರು ಗಾಗಲ್ಸ್ ಧರಿಸಿ ಫೋಟೊಗೆ ಮಕ್ಕಳಿಬ್ಬರ ಜೊತೆಗೆ ಕ್ಯೂಟ್ ಆಗಿ ಸ್ಮೈಲ್ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಜೋಡಿ ಸೆಲೆಬ್ರೆಷನ್ ಮಾಡಿದ ಸ್ಥಳದಲ್ಲಿ ರೆಡ್ ಹಾರ್ಟ್ ಬಲೂನ್‌ಗಳಿಂದ ಅದ್ಭುತವಾಗಿ ಡೆಕೊರೇಷನ್ ಸಹ ಮಾಡಲಾಗಿತ್ತು.
ಚಂದನವನದ ನಟಿ ರಾಧಿಕಾ ಹಾಗೂ ಫ್ಯಾಮಿಲಿಯ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ಫೋಟೋಗಳಿಗೆ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದಾರೆ.
ರಾಧಿಕಾ ಹಾಗೂ ಯಶ್ ಕುಟುಂಬದ ಜೊತೆಗಿರುವ ಫೋಟೊಗಳ ಪೋಸ್ಟ್‌ಗೆ ಅಭಿಮಾನಿಗಳು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಶುಭಾಶಯ ಕೋರಿದ್ದಾರೆ. ಮತ್ತೊಬ್ಬರು ಸುಂದರವಾದ ಕುಟುಂಬ ಎಂದು ಕಮೆಂಟ್ ಹಾಕಿದ್ದಾರೆ.