ರಾಗಿ ತಿಂದವನಿಗೆ ರೋಗವಿಲ್ಲ.. ಈ ಎಲ್ಲ ಕಾಯಿಲೆಗೂ ಇದೊಂದೇ ಮದ್ದು!
ರಾಗಿ ಸೇವನೆಯಿಂದ ಪ್ರೋಟೀನ್ ದೇಹಕ್ಕೆ ಹೆಚ್ಚಾಗಿ ಸಿಗುತ್ತದೆ. ಪ್ರೋಟೀನ್ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿ ಯನ್ನು ಪ್ರತಿನಿತ್ಯ ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.
ರಾಗಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ತೂಕ ಇಳಿಸುವಲ್ಲಿ ರಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರೋಟೀನ್ ಅಂಶದಿಂದಾಗಿ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಾಗಿ ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಮೂಲಕ ಚರ್ಮಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ಕೀಲು ನೋವಿನಿಂದ ಬಳಲುತ್ತಿರುವವರು ರಾಗಿ ಸೇವನೆಯಿಂದ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ತಜ್ಞರು. ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಮಧುಮೇಹದ ಸಮಸ್ಯೆಯನ್ನು ಕಡಿಮೆ ಮಾಡಲು ರಾಗಿ ಉಪಯುಕ್ತವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.