Rahu Gochar 2024: ತನ್ನ ನಡೆ ಬದಲಾಯಿಸಿದ ರಾಹು, ವರ್ಷ 2025ರವರೆಗೆ ಈ ರಾಶಿಗಳ ಜನರಿಗೆ ಲಕ್ಷ್ಮಿ ಕೃಪೆಯಿಂದ ಧನ ಕುಬೇರ ನಿಧಿ ಪ್ರಾಪ್ತಿ ಯೋಗ!
Rahu Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ನಡೆಯಲ್ಲಾಗುವ ಪರಿವರ್ತೆನ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಅದರಲ್ಲಿಯೂ ವಿಶೇಷವಾಗಿ ಕೆಲ ರಾಶಿಗಳ ಜನರ ಜೀವನದಲ್ಲಿ ಇದರಿಂದ ಖುಷಿಗಳೆ, ಖುಷಿಗಳ ಆಗಮನವಾಗಲಿದೆ. ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ (Spiritual News In Kannada)
ಮಿಥುನ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ರಾಹುವಿನ ಈ ಗೋಚರ ಅತ್ಯಂತ ಶುಭವಾಗಿದೆ. ಇದರಿಂದ ನಿಮಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ರಾಹುವಿನ ಕೃಪೆಯಿಂದ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗಲಿದೆ. ಮುಳುಗಿಹೋದ ನಿಮ್ಮ ಹಣ ನಿಮ್ಮ ಕೈಸೇರಲಿದೆ. ಹೊಸ ಕೆಲಸ ಆರಂಭಕ್ಕೆ ಇದು ಸಕಾಲ. ಅದರಲ್ಲಿ ನಿಮಗೆ ಲಾಭ ಸಿಗುವ ಎಲ್ಲಾ ಸಂಕೇತಗಳಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಏಕೆಂದರೆ ಗುರುವಿನ ದೃಷ್ಟಿ ನಿಮ್ಮ ಜಾತಕದ ಸಪ್ತಮ ಭಾವದ ಮೇಲೆ ಬೀಳುತ್ತಿದೆ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ.
ತುಲಾ ರಾಶಿ: ರಾಹು ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ವೈವಾಹಿಕ ಜೀವನ ಉತ್ತಮವಾಗಿರಲಿದೆ. ನಿಂತುಹೋದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ಪಾಟ್ನರ್ಶಿಪ್ ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಮುಳುಗಿಹೋದ ಹಣ ನಿಮ್ಮ ಕೈಸೇರಲಿದೆ. ಆದಾಯದ ಸಾಧನಗಳು ಹೆಚ್ಚಾಗಲಿವೆ. ವ್ಯಾಪಾರದಲ್ಲಿ ಅಪಾರ ಲಾಭ ನಿಮ್ಮದಾಗಲಿದೆ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ನೌಕರವರ್ಗದ ಜನರಿಗೆ ಇದರಿಂದ ಲಾಭ ಉಂಟಾಗಲಿದೆ. ಪದೋನ್ನತಿಯ ಜೊತೆಗೆ ಹಿರಿಯ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ. ರಾಹುವಿನ ಕಾರಣ ಮೊದಲು ನಿಂತು ಹೋದ ಲಾಭಗಳು ನಿಮಗೆ ಮತ್ತೆ ಸಿಗಲಾರಂಭಿಸಲಿವೆ.
ಕುಂಭ ರಾಶಿ: ರಾಹು ನಿಮಗೂ ಕೂಡ ಶುಭ ಫಲಗಳನ್ನು ನೀಡಲಿದ್ದಾನೆ. 18 ಮಾರ್ಚ್, 2025ರವರೆಗೆ ರಾಹು ನಿಮ್ಮ ಜೀವನವನ್ನು ಅಪಾರ ಖುಷಿಗಳಿಂದ ತುಂಬಲಿದ್ದಾನೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಜೀವನದಲ್ಲಿ ದೀರ್ಘಾವಧಿಯಿಂದ ನಡೆದುಕೊಂಡು ಬಂದ ಸಮಸ್ಯೆಗಳು ಅಂತ್ಯವಾಗಲಿವೆ. ಜೀವನದಲ್ಲಿ ಸ್ಥಿರತೆಯನ್ನು ಸಾಧಿಸುವಿರಿ. ಬಿಸ್ನೆಸ್ ಕುರಿತು ಹೇಳುವುದಾದರೆ, ದೀರ್ಘಕಾಲದಿಂದ ಉಂಟಾಗುತ್ತಿರುವ ನಷ್ಟಕ್ಕೆ ಬ್ರೇಕ್ ಬೀಳಲಿದೆ. ಮನಸೋಇಚ್ಛೆ ಲಾಭ ನಿಮ್ಮದಾಗಲಿದೆ. ನೌಕರವರ್ಗದ ಜನರಿಗೂ ಕೂಡ ಲಾಭದ ಸಂಕೇತಗಳು ಬರಲಾರಂಭಿಸಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)