ತಮ್ಮ ದೃಷ್ಟಿ ಮೂಲಕ ಈ ರಾಶಿಯವರ ಜೀವನದಲ್ಲಿ ಹಣದ ಮಳೆಗರೆಯಲಿದ್ದಾರೆ ರಾಹು-ಕೇತು !
ರಾಶಿಗಳ ಮೇಲೆ ಪರಿಣಾಮ : ಎಲ್ಲಾ ರಾಶಿಗಳ ಮೇಲೆ ರಾಹು ಮತ್ತು ಕೇತುಗಳ ಸಂಚಾರದ ಪರಿಣಾಮ ಗೋಚರಿಸುತ್ತದೆ. ಆದರೆ ಕೆಲವು ರಾಶಿಯವರು ಇದರ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ.
ಮೇಷ : ರಾಹು ಮತ್ತು ಕೇತುಗಳ ಸಂಚಾರದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಮೇಷ ರಾಶಿಯವರಿಗೆ ಗುರುವಿನ ಆಶೀರ್ವಾದ ಸಿಗಲಿದೆ. ಈ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ಕರ್ಕಾಟಕ : ಕರ್ಕ ರಾಶಿಯವರು ವ್ಯಾಪಾರದಲ್ಲಿ ಯಶಸ್ವಿಯಾಗುತ್ತಾರೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಮನೆಯ ಹಿರಿಯರ ಸಲಹೆ ಪಡೆಯಬೇಕು. ಅಡೆತಡೆಗಳ ಹೊರತಾಗಿಯೂ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಬಹುದು. ಆರೋಗ್ಯಕ್ಕೆ ವಿಶೇಷ ಗಮನ ಬೇಕು.
ಸಿಂಹ : ರಾಹು-ಕೇತುಗಳ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ ಮತ್ತು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ತುಲಾ : ತುಲಾ ರಾಶಿಯವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. . ಹಣ ಗಳಿಸುವ ಅವಕಾಶ ಒದಗಿ ಬರುವುದು. ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುವುದು. ಕಚೇರಿಯಲ್ಲಿನ ಒತ್ತಡ ಕಡಿಮೆಯಾಗಲಿದೆ. ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುವುದು.