Vipreet Rajyog: ರಾಹು-ಶುಕ್ರರ ಸಂಯೋಗದಿಂದ ಈ ರಾಶಿಯವರಿಗೆ ಕೈ ತುಂಬಾ ಹಣ, ರಾಜಯೋಗ
ಪ್ರಸ್ತುತ ಪಾಪ ಗ್ರಹ ರಾಹು ಮೀನ ರಾಶಿಯಲ್ಲಿದ್ದಾನೆ. ಇತ್ತೀಚೆಗಷ್ಟೇ ಸಂಪತ್ತು, ಐಷಾರಾಮಿ ಜೀವನಕಾರಕನಾದ ಶುಕ್ರನು ಕೂಡ ಮೀನ ರಾಶಿಯನ್ನು ಪ್ರವೇಶಿಸಿದ್ದು ಏಪ್ರಿಲ್ 24ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾರೆ.
ಮೀನ ರಾಶಿಯಲ್ಲಿ ಶುಕ್ರ ರಾಹು ಸಂಯೋಗದಿಂದ ವಿಪರೀತ ರಾಜಯೋಗ ನಿರ್ಮಾಣವಾಗಿದೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮುಂದಿನ ಒಂಬತ್ತು ದಿನ ಮೂರು ರಾಶಿಯ ಜನರಿಗೆ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಹಠಾತ್ ಆರ್ಥಿಕ ಲಾಭ ಮತ್ತು ಪ್ರಗತಿ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ವಿಪರೀತ ರಾಜಯೋಗವು ವೃಷಭ ರಾಶಿಯವರಿಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮಗೆ ಹಠಾತ್ ಧನಲಾಭವಾಗಲಿದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ವಿಪರೀತ ರಾಜಯೋಗವು ಮಿಥುನ ರಾಶಿಯ ಜನರಿಗೂ ಕೂಡ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಶಿಸಬಹುದು. ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ.
ಸ್ವ ರಾಶಿಯಲ್ಲಿ ನಿರ್ಮಾಣವಾಗಿರುವ ವಿಪರೀತ ರಾಜಯೋಗವು ಈ ರಾಶಿಯವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ವಿದೇಶ ಪ್ರವಾಸ ಕೈಗೊಳ್ಳುವ ಯೋಗವಿದ್ದು, ಬಂಪರ್ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.