ಮುಂದಿನ ಒಂದೂವರೆ ವರ್ಷ ಈ ರಾಶಿಯವರು ಸೋಲಿಲ್ಲದ ಸರದಾರರು ! ವೃದ್ದಿಯಾಗುತ್ತಲೇ ಹೋಗುವುದು ಧನ ಸಂಪತ್ತು

Thu, 25 May 2023-10:31 am,

ರಾಹು ಈ ವರ್ಷ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹವೆಂದರೆ ಅದು ರಾಹು. ರಾಹು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ಸರಿಯಾಗಿ ರಾಹು ಮಂಗಳನ ರಾಶಿಯು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಈ ರೀತಿ ರಾಹು ತನ್ನ ಸ್ಥಾನವನ್ನು ಬದಲಿಸುತ್ತಿದ್ದಂತೆಯೇ 3 ರಾಶಿಯವರ ಅದೃಷ್ಟ ಬೆಳಗುತ್ತದೆ. ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಹು ಸಂಕ್ರಮಣವು ಮೇಷ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಲಿದೆ. ಇವರು ಅನುಭವಿಸಿದ್ದ ಕಷ್ಟ ನಷ್ಟಗಳಿಗೆ ವಿರಾಮ ಬೀಳುವುದು. ಮುಂದೆ ಯಾವ ಕೆಲಸ ಮಾಡಿದರೂ ಆರ್ಥಿಕ ಲಾಭ ಗ್ಯಾರಂಟಿ.  ಉದ್ಯೋಗದಲ್ಲಿ ಕೂಡಾ ಪ್ರಗತಿಯಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ರಾಹುವಿನ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವ್ಯಾಪಾರದಲ್ಲಿ ವಿಶೇಷ ಲಾಭವಾಗುವುದು. ಹೊಸ ಮನೆ, ವಾಹನ ಖರೀದಿಸಬಹುದು. ಆದರೆ ತಾಳ್ಮೆ ಮತ್ತು ಸಂಯಮವನ್ನು ಅನುಸರಿಸುವ ಅವಶ್ಯಕತೆಯಿದೆ. ರಾಹು ಸಂಕ್ರಮಣದ ಅವಧಿ ನಿಮ್ಮ ಪಾಲಿಗೆ ಅದೃಷ್ಟ ತರಲಿದೆ. 

ರಾಹು ಅಕ್ಟೋಬರ್ 2023 ರಲ್ಲಿ ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮೀನ ರಾಶಿಯವರಿಗೆ ವಿಶೇಷ ಲಾಭವಾಗುವುದು. ಆರ್ಥಿಕ ಪ್ರಗತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಸಾಲ ನೀಡಿದ ಹಣವನ್ನು ಸಹ ಮರಳಿ ಪಡೆಯಬಹುದು. ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link