ಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್
ಶ್ರಾವಣ ಮಾಸದ ಮೂರನೇ ಸೋಮವಾರದ ಈ ದಿನ (ಆಗಸ್ಟ್ 19) "ರಕ್ಷಾಬಂಧನ" ಅಥವಾ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ರಾಖಿ ಹಬ್ಬ ತುಂಬಾ ವಿಶೇಷವಾಗಿದೆ.
ಇಂದು ಚಂದ್ರನು ಮಕರ ರಾಶಿಯಲ್ಲಿ ಉದಯಿಸಿ, ಕುಂಭ ರಾಶಿಯನ್ನು ಪ್ರವೇಶಿಸುವ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ.
ಜೊತೆಗೆ ರಕ್ಷಾಬಂಧನ ಈ ದಿನ ಕುಂಭ ರಾಶಿಯಲ್ಲಿ ಶನಿ-ಚಂದ್ರರ ಯುತಿಯಿಂದಾಗಿ ಅಪರೂಪದ ರಾಜಯೋಗಗಳು ನಿರ್ಮಾಣವಾಗುತ್ತಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬರೋಬ್ಬರಿ ಒಂಬತ್ತು ದಶಕಗಳ ನಂತರ "ರಾಖಿ ಹಬ್ಬ"ದಲ್ಲಿ ಅಪರೂಪದ ರಾಜಯೋಗಗಳಾದ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಶಶ ರಾಜಯೋಗಗಳು ನಿರ್ಮಾಣವಾಗುತ್ತಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 90 ವರ್ಷಗಳ ಬಳಿಕ ರಕ್ಷಾಬಂಧನದ ದಿನ ರೂಪುಗೊಂಡಿರುವ ಈ ಅಪರೂಪದ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಶಶ ರಾಜಯೋಗಗಳು ಕೆಲವು ರಾಶಿಯವರ ಬದುಕಿನಲ್ಲಿ ಸಂತೋಷದ ಹೊನಲನ್ನು ಹರಿಸಲಿದೆ.
ರಕ್ಷಾಬಂಧನ 2024 ಮೇಷ ರಾಶಿಯವರ ಜೀವನದಲ್ಲಿ ಮೂಡಿದ್ದ ಕಷ್ಟದ ಸಮಯಗಳನ್ನು ನಿವಾರಿಸಿ ಸಂತೋಷದ ಕ್ಷಣಗಳನ್ನು ತರಲಿದೆ. ಆಸ್ತಿ ವಿವಾದಗಳು ಬಗೆಹರಿದು ಮನಸ್ಸಿಗೆ ಸಂತೋಷ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಅದೃಷ್ಟದ ಸಮಯ.
ಈ ಅಪರೂಪದ ರಾಜಯೋಗಗಳು ಧನು ರಾಶಿಯ ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದ್ದು ಹೂಡಿಕೆಯಿಂದ ಬಂಪರ್ ಲಾಭವನ್ನು ಗಳಿಸುವಿರಿ. ಕೆಲಸ-ಕಾರ್ಯಗಳು ವೇಗವನ್ನು ಪಡೆಯಲಿದ್ದು, ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ.
2024ರ ರಕ್ಷಾ ಬಂಧನವು ಮಕರ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಹೊಸ ಪ್ರಾಜೆಕ್ಟ್ ಕೈ ಸೇರಲಿದ್ದು, ಹಣದ ಹರಿವು ಹೆಚ್ಚಾಗಲಿದೆ. ಕೌಟುಂಬಿಕ ಸುಖ-ಸಂತೋಷ ಹೆಚ್ಚಾಗಲಿದೆ.
ರಾಖಿ ಹಬ್ಬದಿಂದ ಕುಂಭ ರಾಶಿಯ ಜನರ ಜೀವನದಲ್ಲಿ ಮೂಡಿದ್ದ ಸಮಸ್ಯೆಗಳು ಕೊನೆಗೊಳ್ಳಲಿವೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಹಣಕಾಸಿ ಸ್ಥಿತಿ ಸುಧಾರಿಸಿ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯುವಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.