`Big Boss-14`ರಲ್ಲಿ ಸೆನ್ಸೇಷನ್ ಹುಟ್ಟುಹಾಕಲು ಬರುತ್ತಿದ್ದಾಳೆ ರಾಮಾನಂದ್ ಸಾಗರ್ ಮರಿಮೊಮ್ಮಗಳು !

Fri, 04 Sep 2020-7:56 pm,

ರಾಮಾಯಣ್ ಸಿರಿಯಲ್ ನಿರ್ಮಿಸಿದ ರಾಮಾನಂದ್ ಸಾಗರ್ ಅವರ ಮೊಮ್ಮಗಳು ಈ ಸಾಕ್ಷಿ ಚೋಪ್ರಾ. ರಾಮಾನಂದ ಸಾಗರ್ ಸೀತಾ-ರಾಮರ ಸ್ವರೂಪವನ್ನು ಮನೆಮನೆಗೆ ತಲುಪಿಸಿದ್ದರು. ಆದರೆ, ಇದಕ್ಕೆ ವಿಪರೀತ ಎಂಬಂತೆ ಸಾಕ್ಷಿ ತುಂಬಾ ಬೋಲ್ಡ್ ಆಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷಿ ಭಾರಿ ಫೇಮಸ್ ಆಗಿದ್ದಾರೆ ಹಾಗೂ ಕೇವಲ ಇನ್ಸ್ಟಾ ಗ್ರಾಮ್ ನಲ್ಲಿ ಸಾಕ್ಷಿ 509 ಸಾವಿರ ಹಿಂಬಾಲಕರನ್ನು ಹೊಂದಿದ್ದಾರೆ.

ತನ್ನ ಟಾಪ್ ಲೆಸ್ ಹಾಗೂ ಬಿಕಿನಿ ಭಾವಚಿತ್ರಗಳ ಮೂಲಕ ಸಾಕ್ಷಿ ಹಲವು ಬಾರಿ ಹೆಡ್ ಲೈನ್ ಗಿಟ್ಟಿಸಿದ್ದಾಳೆ.

ಸಾಕ್ಷಿ ಯುಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಅನ್ನೂ ಕೂಡ ಹೊಂದಿದ್ದಾಳೆ. ಅವಳ ಹಲವು ವಿಡಿಯೋಗಳು ಹಿಟ್ ಆಗಿವೆ.

ರಾಮಾನಂದ್ ಸಾಗರ್ ಮಗಳಾಗಿರುವ ಮೋತಿ ಸಾಗರ್ ಮೊಮ್ಮಗಳಾಗಿದ್ದು, ಮೀನಾಕ್ಷಿ ಇವರ ತಾಯಿಯಾಗಿದ್ದಾರೆ. ಮೂಲಗಳಿಂದ ಬಂದ ವರದಿಗಳು ಒಂದು ವೇಳೆ ನಿಜ ಎಂದು ಸಾಬೀತಾದರೆ ಸಾಕ್ಷಿ ಬಿಗ್ ಬಾಸ್-14ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ನಲ್ಲಿ ಓದಿರುವ ಸಾಕ್ಷಿ ಬಳಿಕ ಕ್ಯಾಲಿಫೋರ್ನಿಯಾ, ಅಮೇರಿಕಾದ 'ದಿ ಲೀ ಸ್ಟ್ರಾಸ್ ಬರ್ಗ್ ಥಿಯೇಟರ್ ಅಂಡ್ ಇನ್ಸ್ಟಿಟ್ಯೂಟ್' ಮೂಲಕ ಚಿತ್ರ ನಿರ್ಮಾಣದ ಕೋರ್ಸ್ ಮಾಡಿದ್ದಾರೆ. ಸಾಕ್ಷಿ ಓರ್ವ ಉತ್ತಮ ಗಾಯಕಿಯೂ ಕೂಡ ಆಗಿದ್ದಾಳೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link