ಈ ಎಲೆ ತಿಂದರೆ ಸಾಕು ನೋವಿಲ್ಲದೇ ಹೊರ ಹೋಗುತ್ತದೆ ಕಿಡ್ನಿ ಸ್ಟೋನ್ !
ರಾಮಫಲ ಹಣ್ಣಿನ ಮರದ ಎಲೆಗಳು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಮೂತ್ರಕೋಶದ ಆರೋಗ್ಯಕ್ಕೆ ಸಂಜೀವಿನಿಯಂತಿದೆ.
ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಸಣ್ಣ ಖನಿಜದ ನಿಕ್ಷೇಪಗಳನ್ನೇ ಕಿಡ್ನಿ ಸ್ಟೋನ್ ಎಂದು ಕರೆಯುತ್ತಾರೆ.
ಮೂತ್ರಪಿಂಡದ ಕಲ್ಲುಗಳು ಅತ್ಯಂತ ಅಪಾಯಕಾರಿ. ಇದರಿಂದ ಹೊಟ್ಟೆಯಲ್ಲಿ ಅಸಹನೀಯ ನೋವು ಉಂಟಾಗುತ್ತದೆ.
ಕಿಡ್ನಿಯಲ್ಲಿ ಕಲ್ಲು ಇರುವವರು ಎರಡು ಚಮಚ ಈ ಎಲೆಯ ರಸವನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು.
ಮೂತ್ರಪಿಂಡವನ್ನು ಶುದ್ಧೀಕರಿಸುವ ಗುಣ ರಾಮಫಲದ ಎಲೆಗಳಲ್ಲಿ ಇದೆ. ಮೂತ್ರಪಿಂಡದ ಕಲ್ಲು ಕರಗಿ ನೋವೇ ಇಲ್ಲದಂತೆ ಮೂತ್ರದ ಮೂಲಕ ಹೊರ ಹೋಗುತ್ತದೆ.
ಈ ಎಲೆಯನ್ನು ಬಾಯಿಗೆ ಹಾಕಿಕೊಂಡು ಸ್ವಲ್ಪ ಸ್ವಲ್ಪವಾಗಿ ಜಗಿದು ರಸವನ್ನು ನುಂಗುವುದರಿಂದಲೂ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಶುಗರ್ ಮತ್ತು ಬಿಪಿಯಿಂದ ಬಳಲುತ್ತಿರುವವರು ಈ ಎಲೆಗಳನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.