‘ಅನಿಮಲ್’ ಸಿನಿಮಾದಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಪಡೆದಿದ್ದು ಇಷ್ಟು ಕೋಟಿ ಸಂಭಾವನೆ…!

Sun, 03 Dec 2023-9:07 pm,

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಅನಿಮಲ್ ಬಿಡುಗಡೆಯಾದ ಎರಡೇ ದಿನಗಳಲ್ಲಿ ಬಾಕ್ಸ್ ಆಫೀಸ್’ನಲ್ಲಿ ಹೊಸ ದಾಖಲೆ ಬರೆದು ಗಮನಾರ್ಹ ಆದಾಯ ಗಳಿಸಿದೆ.

ನಾವಿಂದು ಈ ವರದಿಯಲ್ಲಿ ಅನಿಮಲ್ ಚಿತ್ರದಲ್ಲಿ ನಟಿಸಲು ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಪಡೆದುಕೊಂಡ ಸಂಭಾವನೆ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ ಹಿಂದೆ, ರಣಬೀರ್ ಕಪೂರ್ ಅನಿಮಲ್‌ ಸಿನಿಮಾಗಾಗಿ 30 ರಿಂದ 35 ಕೋಟಿ ರೂಪಾಯಿಗಳ ಮುಂಗಡ ಶುಲ್ಕವನ್ನು ವಿಧಿಸಿದ್ದಾರೆ ಎಂದು ಪಿಂಕ್ವಿಲ್ಲಾ ಪ್ರತ್ಯೇಕವಾಗಿ ವರದಿ ಮಾಡಿತ್ತು. ಸಾಮಾನ್ಯವಾಗಿ ಪ್ರತಿ ಚಿತ್ರಕ್ಕೆ ರೂ. 70 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಅನಿಮಲ್‌ ಸಿನಿಮಾದ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಕಪೂರ್ ತಮ್ಮ ನಟನಾ ಶುಲ್ಕವನ್ನು 50 ಪ್ರತಿಶತಕ್ಕಿಂತ ಹೆಚ್ಚು ಕಡಿಮೆ ಮಾಡಿದ್ದಾರೆ.

ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌’ನ ವರದಿಯ ಪ್ರಕಾರ, ಬಾಬಿ ಡಿಯೋಲ್ 4-5 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನುಳಿದಂತೆ ರಶ್ಮಿಕಾ ಮಂದಣ್ಣ ರೂ. 4 ಕೋಟಿ ಮತ್ತು ಅನಿಲ್ ಕಪೂರ್ ರೂ. 2 ಕೋಟಿ ಪಡೆದಿದ್ದಾರೆ.

ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ ಮತ್ತು ಅನಿಲ್ ಕಪೂರ್ ಸೇರಿದಂತೆ ಅನೇಕ ನಟರು ಅಭಿನಯಿಸಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು ಬಿಡುಗಡೆಯಾದ 2 ದಿನಕ್ಕೆ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಮಹತ್ವದ ಪಾತ್ರವನ್ನು ವಹಿಸಿದ್ದರೆ, ಅನುಭವಿ ನಟ ಅನಿಲ್ ಕಪೂರ್ ಬಲ್ಬೀರ್ ಸಿಂಗ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಪತ್ನಿ ಗೀತಾಂಜಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link