Rashmika Mandanna: ವರ್ಕೌಟ್ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ
ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಹತ್ತಾರು ಹೊಸ ಹೊಸ ಅವಕಾಶಗಳು ಕಿರಿಕ್ ಬೆಡಗಿಯನ್ನು ಹುಡುಕಿಕೊಂಡು ಬರುತ್ತಿವೆ.
ಸಿನಿಮಾ ಕೆಲಸದ ಜೊತೆಗೆ ಫಿಟ್ ಆಗಿರಲು ಡಯಟ್ ಜೊತೆ ವರ್ಕೌಟ್ ಮಾಡ್ತಾರೆ ರಶ್ಮಿಕಾ. ಅನೇಕ ಬಾರಿ ಅವರು ಜಿಮ್ ಫೋಟೋಗಳನ್ನು ಹಂಚಿಕೊಂಡಿದ್ದರು.
ಇದೀಗ ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್ ಮಾಡಿದ ಬಳಿಕ ಫೋಟೋ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸೆಳೆದಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ’ ಸಿನಿಮಾದಿಂದ ಪ್ಯಾನ್ ಇಂಡಿಯಾ ನಟಿ ಎಂಬ ಟೈಟಲ್ ಪಡೆದುಕೊಂಡರು. ಹಾಗೆಯೇ ಅವರು ಬಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಿರುವ ರಶ್ಮಿಕಾ ಯಾವಾಗಲು ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ, ಸಿದ್ದಾರ್ಥ್ ಮಲ್ಹೋತ್ರಾ ಜೊತೆಗೆ ಮಿಷನ್ ಮಜ್ನು ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಇದಲ್ಲದೇ ಅಮಿತಾಬ್ ಬಚ್ಚನ್ ಜೊತೆ ಗುಡ್ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಬಹುದಿನಗಳ ಕನಸು ನನಸಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಥಲಪತಿ ವಿಜಯ್ ನಟನೆಯ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಆಗಿದ್ದಾರೆ.