Rashmika Mandanna: ಸಂಕ್ರಾಂತಿಗೆ ಆರು ಭಾಷೆಯಲ್ಲಿ ವಿಶಸ್ ತಿಳಿಸಿದ ನ್ಯಾಶ್ನಲ್ ಕ್ರಶ್!
ಕೊಡಗಿನ ಕುವರಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲಿ ಸಿನಿಮಾ ಕೆಲಸಗಳ ಮಧ್ಯೆ, ಸಂಕ್ರಾಂತಿ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.
ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಂಕ್ರಾಂತಿ ದಿನದಂದು ಕನ್ನಡದಲ್ಲಿ ಸಂಕ್ರಾಂತಿ ಬದಲು ಪೊಂಗಲ್ ಅಂತ ಬರೆದು ಸೋಷಿಯಲ್ ಮಿಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.
ನಟಿ ರಶ್ಮಿಕಾ ಸಂಕ್ರಾಂತಿಯ ಶುಭಾಶಯಗಳನ್ನು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಆರು ಭಾಷೆಯಲ್ಲೂ ಅವರು ಸೋಷಿಯಲ್ ಮಿಡಿಯಾ ಮೂಲಕ ವಿಶ್ ಮಾಡಿದ್ದಾರೆ.
ಕಿರಿಕ್ ಸುಂದರಿ ರಶ್ಮಿಕಾ ಪೋಸ್ಟ್ಗೆ ಒಂದು ಲಕ್ಷಕ್ಕೂ ಹೆಚ್ಚಿ ಲೈಕ್ಸ್ ಬಂದಿದ್ದು, ಫ್ಯಾನ್ಸ್ ಕಮೆಂಟ್ ವಿಭಾಗದಲ್ಲಿ ರಾಯಲ್ ಕ್ವೀನ್, ಕ್ರಶ್, ಕ್ವೀನ್ ಅಂತೆಲ್ಲಾ ಬರೆದರೇ, ಇನ್ನು ಕೆಲವರು ಸಂಕ್ರಾಂತಿಗೆ ಶುಭಾಶಯ ಹೇಳಿದ್ದಾರೆ.
ನಟಿ ರಶ್ಮಿಕಾ ಒಂದು ಕಡೆ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ, ಮತ್ತೊಂದು ಕಡೆ ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಇವರು ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಸುದ್ದಿ ಹರಡಿದೆ.
ರಶ್ಮಿಕಾ ಹಗೂ ವಿಜಯ್ ಜೋಡಿ ಡೇಟಿಂಗ್ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗುವುದರ ಜೊತೆಗೆ, ಇಬ್ಬರೂ ಜೊತೆಯಾಗಿರುವಾಗ ಸಾಕಷ್ಟು ಬಾರಿ ಪಾಪರಾಜಿಗಳ ಕಣ್ಣಿಗೆ ಒಟ್ಟಿಗೆ ತಗ್ಲಾಕೊಂಡಿದ್ದಾರೆ.
ರಶ್ಮಿಕಾ ಹಾಗೂ ವಿಜಯ್ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡಿದ್ದರೂ, ಇದುವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತಗೊಳಿಸಿಲ್ಲ.