ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್ ಅಶ್ವಿನ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ? ಇವರ ತಿಂಗಳ ಆದಾಯ ಇಷ್ಟು...
ಭಾರತೀಯ ಕ್ರಿಕೆಟ್‌ನ ಅತ್ಯಂತ ಹಿರಿಯ ಆಟಗಾರ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಸ್ತಿ ವಿಚಾರವೂ ಮುನ್ನೆಲೆಗೆ ಬಂದಿದ್ದು, ಕ್ರಿಕೆಟ್, ವ್ಯಾಪಾರ, ಜಾಹೀರಾತಿನಿಂದ ಪಡೆಯುತ್ತಿರುವ ಆದಾಯ ಎಷ್ಟು ಎಂಬುದನ್ನು ಈ ವರದಿಯಲ್ಲಿ ನೋಡೋಣ.
ರವಿಚಂದ್ರನ್ ಅಶ್ವಿನ್ ಭಾರತೀಯ ಕ್ರಿಕೆಟ್‌ನ ಅತ್ಯಂತ ಹಿರಿಯ ಆಟಗಾರ. ಸ್ಟಾರ್ ಸ್ಪಿನ್ನರ್ ಅಶ್ವಿನ್ ಅವರ ನಿವ್ವಳ ಮೌಲ್ಯ ಸುಮಾರು ರೂ.130 ಕೋಟಿ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಚೆನ್ನೈನಲ್ಲಿರುವ ಮನೆಯ ಬೆಲೆ 8 ಕೋಟಿಗೂ ಹೆಚ್ಚು ಎನ್ನಲಾಗಿದೆ.
ಅಶ್ವಿನ್ ಅವರ ವಾರ್ಷಿಕ ಆದಾಯ ರೂ.10 ಕೋಟಿಗೂ ಹೆಚ್ಚು. ಅಶ್ವಿನ್ ಕ್ರಿಕೆಟ್, ಯೂಟ್ಯೂಬ್ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಸಂಪಾದಿಸುತ್ತಾರೆ. ಮತ್ತು ಐಪಿಎಲ್‌ನಿಂದ ಕೋಟ್ಯಂತರ ರೂಪಾಯಿ ಸಂಭಾವನೆ ಕೂಡ ಪಡೆಯುತ್ತಾರೆ.
ಅಶ್ವಿನ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. ಆದರೆ ಈ ಬಾರಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಇನ್ನು ಪ್ರತಿ ಒಪ್ಪಂದದ ಮೇಲೆ ಅವರು ಬಿಸಿಸಿಐನಿಂದ ರೂ.5 ಕೋಟಿ ವಾರ್ಷಿಕ ವೇತನವನ್ನು ಪಡೆಯುತ್ತಾರೆ.
ಅಶ್ವಿನ್ ಅವರು Oppo, Move ಮತ್ತು Dream 11 ಸೇರಿದಂತೆ ಹಲವಾರು ಖಾಸಗಿ ಬ್ರ್ಯಾಂಡ್‌ಗಳನ್ನು ಜಾಹೀರಾತುಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.