Raw Mango Benefits: ನಿತ್ಯ ಒಂದು ಗ್ಲಾಸ್ ಮಾವಿನ ಪಾನಕ ಸೇವಿಸುವಿದರಿಂದ ಹಲವು ಲಾಭಗಳಿವೆ
1. ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ - ಬೇಸಿಗೆ ಕಾಲದಲ್ಲಿ ಹಸಿವೆ ಕಡಿಮೆಯಾಗುವುದು ಸಾಮಾನ್ಯ ಹಾಗೂ ಯಾವೊಂದು ದಿನ ಹೆವಿ ಊಟ ಮಾಡಿದರೆ ಅಥವಾ ಕಾರದ ಪದಾರ್ಥಗಳನ್ನು ಸೇವಿಸಿದರೆ ಡಯಾರಿಯಾ, ಹೊಟ್ಟೆ ಬಿಗಿತ, ಅಸಿಡಿಟಿ, ಹೊಟ್ಟೆನೋವು ಹಾಗೂ ಗ್ಯಾಸ್ ಗಳಂತಹ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಚ್ಚಾ ಮಾವಿನ ಕಾಯಿಯಲ್ಲಿ ಪ್ಯಾಕ್ಟೀನ್ ಹೇರಳ ಪ್ರಮಾಣದಲ್ಲಿರುತ್ತದೆ. ಇದು ಪಚನಕ್ರಿಯೆಗೆ ಸಹಾಯಕಾರಿ ಅಂಶವಾಗಿದೆ ಮತ್ತು ಇದು ಹೊಟ್ಟೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ನಿವಾರಿಸುತ್ತದೆ.
2. ರೋಗಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ಬಲಪಡಿಸುತ್ತದೆ - ಮಾವಿನ ಪಾನಕದಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಇವು ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ನೀಡುತ್ತವೆ. ಜೊತೆಗೆ ಇದರಲ್ಲಿ ಮೆಲಿಕ್, ಸಿಟ್ರಿಕ್ ಹಾಗೂ ಆಕ್ಸಾಲಿಕ್ ನಂತನ ಹಲವು ಆಮ್ಲಗಳಿರುತ್ತವೆ. ಇವು ನಿಮ್ಮ ಲೀವರ್ ಅನ್ನು ಆರೋಗ್ಯಕರವಾಗಿರಿಸುತ್ತವೆ. ಇದಲ್ಲದೆ ಇದು ಜಾಂಡಿಸ್ ನಂತ ಕಾಯಿಲೆಯಿಂದಲೋ ಕೂಡ ರಕ್ಷಣೆ ಒದಗಿಸುತ್ತವೆ.
3. ಕಣ್ಣಿನ ಆರೋಗ್ಯಕ್ಕೆ ಉತ್ತಮ - ಕಚ್ಚಾ ಮಾವಿನ ಪಾನಕದಲ್ಲಿ ವಿಟಮಿನ್ ಎ ಕೂಡ ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಾದ ಕಣ್ಣಿನ ಪೊರೆ, ಇರುಳು ಕುರುಡುತನ ಹಾಗೂ ಒಣ ಕಣ್ಣಿನ ಸಮಸ್ಯೆಯಿಂದ ರಕ್ಷಣೆ ಕೂಡ ಒದಗಿಸುತ್ತದೆ.
4. ಕ್ಯಾನ್ಸರ್ ನಿಂದ ರಕ್ಷಣೆ ಕೂಡ ಒದಗಿಸುತ್ತದೆ - ಮಾವಿನ ಪಾನಕದಲ್ಲಿ ಸಿಗುವ ವಿಟಮಿನ್ ಸಿ ಶರೀರದ ಜೊತೆಗೆ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಶರೀರದಲ್ಲಿ ಆಂಟಿ ಆಕ್ಸಿಡೆಂಟ್ ಗಳು ನಿರ್ಮಾಣಗೊಳ್ಳುತ್ತವೆ. ಈ ಆಂಟಿ ಆಕ್ಸಿಡೆಂಟ್ ಗಳ ಸಹಾಯದಿಂದ ಬ್ರೆಸ್ಟ್ ಕ್ಯಾನ್ಸರ್, ಸ್ಕಿನ್ ಕ್ಯಾನ್ಸರ್, ಕೊಲನ್ ಕ್ಯಾನ್ಸರ್ ಗಳಂತಹ ಕಾಯಿಲೆಗಳಿಂದ ಪಾರಾಗಬಹುದು.
5. ಡಿಪ್ರೆಶನ್ ನಿಂದ ಕಾಪಾಡುತ್ತದೆ- ಇತ್ತೀಚಿನ ದಿನಗಳಲ್ಲಿ ಜನರಲ್ಲಿ ವಿಪರೀತ ಪ್ರಮಾಣದಲ್ಲಿ ಡಿಪ್ರೆಶನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಾವಿನ ಕಾಯಿಯ ಪಾನಕದಲ್ಲಿ ಸಿಗುವ ವಿಟಮಿನ್ ಬಿ6 , ಮೆದುಳನ್ನು ಒತ್ತಡ ಮುಕ್ತವಾಗಿಸುವ ಹಾರ್ಮೋನ್ ಗಳು ಶರೀರದಲ್ಲಿ ಉತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಡಿಪ್ರೆಶನ್ ಕಡಿಮೆಯಾಗುತ್ತದೆ.