ಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೈತರಿಗೆ ದೊಡ್ಡ ಪರಿಹಾರವನ್ನು ಘೋಷಿಸಿದೆ. ಈಗ ರೈತರು ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ರೂ.ವರೆಗೆ ಕೃಷಿ ಸಾಲವನ್ನು ಪಡೆಯಬಹುದು.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಕೃಷಿ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.
ಈ ಹಿಂದೆ ರೈತರು ತಮ್ಮ ಜಮೀನು ಅಥವಾ ಇತರ ಆಸ್ತಿಯನ್ನು ಅಡಮಾನವಿಟ್ಟು ಸಾಲ ಪಡೆಯಬೇಕಿತ್ತು. ಆದರೆ ಈಗ ಈ ನಿಯಮ ಬದಲಾಗಿದ್ದು, ರೈತರು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು.
ರೈತರನ್ನು ಆರ್ಥಿಕವಾಗಿ ಬಲಪಡಿಸಲು ಮತ್ತು ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಆರ್‌ಬಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದ ರೈತರು ಅಗತ್ಯ ಕೃಷಿ ವೆಚ್ಚಗಳಾದ ಬೀಜಗಳು, ರಸಗೊಬ್ಬರಗಳು ಮತ್ತು ನೀರಾವರಿ ಇತ್ಯಾದಿಗಳಿಗೆ ಸುಲಭವಾಗಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಆರ್‌ಬಿಐ ಈ ನಿರ್ಧಾರದಿಂದಾಗಿ ರೈತರಿಗೆ ಯಾವುದೇ ತೊಂದರೆಯಿಲ್ಲದೆ ಸಾಲ ಸಿಗಲಿದೆ.ಕೃಷಿ ಉತ್ಪಾದನೆ ಹೆಚ್ಚಲಿದೆ.ರೈತರ ಆದಾಯ ಹೆಚ್ಚಲಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ.
ಈ ಸಂಬಂಧ ಆರ್‌ಬಿಐ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದೆ. ಈ ನಿಯಮ ಜಾರಿಗೆ ಬಂದ ನಂತರ ರೈತರು ಸಾಲ ಪಡೆಯಲು ತಮ್ಮ ಹತ್ತಿರದ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯಬಹುದು.