ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ..! ನಾಲ್ಕು ಆಟಗಾರರಿಗೆ 44 ಕೋಟಿ ಬಿಡ್‌..!!

Mon, 25 Nov 2024-8:20 am,

RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್‌ನ 18 ನೇ ಆವೃತ್ತಿಯ ಮೊದಲ ದಿನ ಪೂರ್ಣಗೊಂಡಿದೆ. ಇಲ್ಲಾ ತಂಡಗಳು ಸ್ಟಾರ್‌ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಕೋಟಿ ಕೋಟಿ ಹಣ ಸುರಿಸಿ ಖರೀದಿಸಲು ಪೈಪೋಟಿ ನಡೆಸಿವೆ.  

ಐಪಿಎಲ್ ನಲ್ಲಿ ಆಡುತ್ತಿರುವ ಒಟ್ಟು 10 ಫ್ರಾಂಚೈಸಿಗಳು ಇದರಲ್ಲಿ ಪಾಲ್ಗೊಂಡಿವೆ. 577 ಆಟಗಾರರು ಈ ಲಿಸ್ಟ್‌ನಲ್ಲಿ ಇದ್ದು, ಆಟಗಾರರ ಖರೀದಿಗಾಗಿ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದಾರೆ.   

ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯಸ್ಥರು ಹರಾಜಿನಲ್ಲಿ ಭಾಗವಹಿಸಿದ್ದರು.  

ಮೊದಲ ದಿನ 84 ಆಟಗಾರರು ಸ್ಪರ್ಧಿಸಿದ್ದರು. ಅವರಿಗಾಗಿ ಹರಾಜು ನಡೆದು ಮುಗಿಇದೆ. ಈ ಪೈಕಿ ಆರ್‌ಸಿಬಿ ತಂಡ ನಾಲ್ಕು ಆಟಗಾರರ ಮೇಲೆ ಕೋಟಿ ಕೋಟಿ ಹಣವನ್ನು ಸುರಿದಿದೆ.  

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಹರಾಜಿನಲ್ಲಿ ಆಯ್ಕೆಯಾದ ಟಿ20 ಸ್ಪೆಷಲಿಸ್ಟ್‌ಗಳನ್ನು ಆಯ್ಕೆ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಬಲ್ಲ ಆಟಗಾರರಿಗೆ ತಂಡ ಅವಕಾಶ ಕಲ್ಪಿಸಿದೆ.   

ಐಪಿಎಲ್ ಋತುವಿನ ಆರಂಭದಿಂದಲೂ ಇದುವರೆಗೆ ಕಪ್ ಗೆಲ್ಲದ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಪ್ರತಿ ಭಾರಿಯೂ ಆರ್‌ಸಿಬಿ ತಂಡ ಕಪ್‌ ಗೆಲ್ಲುವ ನಿರೀಕ್ಷೆಯಿಂದ ಫಿಲ್ಡ್‌ಗೆ ಎಂಟ್ರಿ ಕೊಡುತ್ತದೆಯಾದರೂ, ಗೆಲ್ಲುವಲ್ಲು ಯಶಸ್ವಿಯಾಗಿಲ್ಲ.  

ಆದರೆ ಈ ಭಾರಿ ತಂಡದ ಆಟಗಾರರ ಆಯ್ಕೆಯಲ್ಲಿ ಜಾಗರೂಕವಾಗಿ ಫ್ರಾಂಚೈಸಿ ಯೋಚಿಸಿದ್ದು, ವೈಫಲ್ಯಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ.  

ಈ ಮೆಗಾ ಆಕ್ಷನ್‌ನಲ್ಲಿ, T20 ಸ್ಪೆಷಲಿಸ್ಟ್‌ಗಳಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಜೊತೆಗೆ ಡ್ಯಾಶಿಂಗ್ ಓಪನರ್ ಫಿಲ್ ಸಾಲ್ಟ್ ಮತ್ತು ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಆಯ್ಕೆ ಮಾಡಲಾಗಿದೆ.  

ಇಂಗ್ಲೆಂಡ್ ನ ಲಿಯಾಮ್ ಲಿವಿಂಗ್ ಸ್ಟೋನ್- 8.75 ಕೋಟಿ ರೂ., ಫಿಲ್ ಸಾಲ್ಟ್- 11.50 ಕೋಟಿ, ಟೀಂ ಇಂಡಿಯಾ ಆಟಗಾರ ಜಿತೇಶ್ ಶರ್ಮಾ- 11 ಕೋಟಿ, ಆಸ್ಟ್ರೇಲಿಯಾದ ಹೇಜಲ್ ವುಡ್- 12.50 ಕೋಟಿ ರೂ. ಖರೀದಿ ಮಾಡಲಾಗಿದ್ದು, ಈ ನಾಲ್ಕು ಆಟಗಾರರ ಮೇಲೆ ಆರ್‌ಸಿಬಿ ತಂಡ 44 ಕೋಟಿ ಬಿಡ್‌ ಮಾಡಿದೆ.  

ಇವರ ಸೇರ್ಪಡೆಯಿಂದ ಬ್ಯಾಟಿಂಗ್ ಕ್ರಮಾಂಕ ಬಲಗೊಂಡಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ಅವರಂತಹ ತಂಡದೊಂದಿಗೆ ತಂಡವು ಬಲಿಷ್ಠವಾಗಿ ಕಾಣುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link