RCB ಪ್ಲೇಆಫ್ ಪ್ರವೇಶಿಸಬೇಕೆಂದ್ರೆ ಈ ತಂಡಗಳು ಸೋಲಲೇಬೇಕು! ಈ ಲೆಕ್ಕಾಚಾರದಂತೆ ನಡೆದ್ರೆ ಎಂಟ್ರಿ ಪಕ್ಕಾ!

Fri, 10 May 2024-6:06 pm,

ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಸೀಸನ್’ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೇ ಗೆಲುವು ಸಾಧಿಸಿದೆ. ಮೇ 9ರಂದು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌’ಸಿಬಿ 60 ರನ್‌’ಗಳಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

47 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್‌’ಗಳ ನೆರವಿನಿಂದ 92 ರನ್ ಗಳಿಸಿದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಆರ್‌’ಸಿಬಿ ಗೆಲುವಿನ ಹೀರೋ ಆಗಿ ಮಿಂಚಿದರು. ಅಂದಹಾಗೆ ಈ ಗೆಲುವಿನೊಂದಿಗೆ, ಆರ್‌’ಸಿಬಿ ಪ್ಲೇಆಫ್‌ ತಲುಪುವ ಅವಕಾಶವನ್ನು ಹಾಗೇ ಉಳಿಸಿಕೊಂಡಿದೆ,

ಆದರೆ, ಪ್ಲೇಆಫ್‌ ತಲುಪುವ RCB ಹಾದಿಯು ಇನ್ನೂ ಕಷ್ಟಕರವಾಗಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌’ಸಿಬಿ ಪ್ರಸ್ತುತ 12 ಪಂದ್ಯಗಳನ್ನಾಡಿದ್ದು, ಹತ್ತು ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್’ನಲ್ಲಿ ಏಳನೇ ಸ್ಥಾನದಲ್ಲಿದೆ. ಇನ್ನೊಂದೆಡೆ ತಂಡದ  ನೆಟ್ ರನ್ ರೇಟ್ ಪ್ರಸ್ತುತ +0.217 ನಲ್ಲಿದೆ.

ಇನ್ನು ಮುಂದಿನ ಪಂದ್ಯದಲ್ಲಿ ಆರ್‌’ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಿದೆ. RCB ತನ್ನ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕ ಪಡೆಯುತ್ತದೆ. ಮತ್ತೊಂದೆಡೆ, ಸನ್‌ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪಂದ್ಯಗಳ ಫಲಿತಾಂಶಗಳೂ ಕೂಡ, RCB ಪ್ಲೇ ಆಫ್ ಪ್ರವೇಶದ ಲೆಕ್ಕಾಚಾರಕ್ಕೆ ಅವಲಂಬಿಸಬೇಕಾಗುತ್ತದೆ.

ಮುಂದೆ ತಿಳಿಸಿರುವ ಲೆಕ್ಕಾಚಾರದ ಪ್ರಕಾರ ನಡೆದರೆ ಆರ್ ಸಿ ಬಿ, ನಾಲ್ಕಲ್ಲ ಮೂರನೇ ಸ್ಥಾನಕ್ಕೂ ಏರಬಹುದು. ಹೇಗೆಂದರೆ,  ಚೆನ್ನೈ ತಂಡ ಗುಜರಾತ್, ರಾಜಸ್ಥಾನ ಮತ್ತು ಆರ್‌’ಸಿಬಿ ವಿರುದ್ಧ ಸೋಲಬೇಕು. ಸನ್ ರೈಸರ್ಸ್ ಹೈದರಾಬಾದ್ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಪರಾಭವಗೊಳ್ಳಬೇಕು. ದೆಹಲಿ ಕ್ಯಾಪಿಟಲ್ಸ್ RCB ಮತ್ತು ಲಕ್ನೋ ವಿರುದ್ಧ ಸೋಲಬೇಕು. ಲಕ್ನೋ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕು, ಆದರೆ ಮುಂಬೈ ವಿರುದ್ಧ ಸೋಲಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಮುಂಬರುವ 2 ಪಂದ್ಯಗಳಲ್ಲೂ ಆರ್ ಸಿ ಬಿ ವಿಜಯ ಸಾಧಿಸಬೇಕು.

ಮೇಲಿನ ಲೆಕ್ಕಾಚಾರವು ಸರಿಹೊಂದಿದರೆ, RCB ಮೂರನೇ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್  ಪಡೆಯುವ ಉತ್ತಮ ಅವಕಾಶವನ್ನು ಹೊಂದುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿದರೂ, RCB ಮೂರನೇ ಸ್ಥಾನವನ್ನು ಗಳಿಸಬಹುದು. ಏಕೆಂದರೆ ರಿಷಬ್ ಪಂತ್ ತಂಡದ ನೆಟ್ ರನ್ ರೇಟ್ RCB ಗಿಂತ ಕೆಟ್ಟದಾಗಿದೆ.

ಇನ್ನು ಮುಂದೆ ತಿಳಿಸಿರುವ ಸಮೀಕರಣವು ಸರಿಹೊಂದಿದರೆ, ನಾಲ್ಕನೇ ಸ್ಥಾನ ಪಡೆಯುವ ಮೂಲಕ RCB ಪ್ಲೇ ಆಫ್’ಗೆ ಅರ್ಹತೆ ಪಡೆಯುತ್ತದೆ. ಅದೇನೆಂದರೆ RCB ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಅಲ್ಲದೆ, SRH ಮತ್ತು CSK ತಮ್ಮ ಉಳಿದ ಎಲ್ಲಾ ಪಂದ್ಯಗಳಲ್ಲಿ ಸೋಲಬೇಕು. SRH ಮತ್ತು CSK ಎರಡೂ ತಲಾ 16 ಅಂಕಗಳನ್ನು ತಲುಪಿದರೆ, RCB ಯ ಕನಸು ಭಗ್ನಗೊಳ್ಳುತ್ತದೆ. ಒಂದು ವೇಳೆ ಸೋತರೆ ಉಭಯ ತಂಡಗಳಿಗೂ 14 ಅಂಕವಷ್ಟೇ ಪಡೆಯಲು ಸಾಧ್ಯವಾಗುತ್ತದೆ.

ಒಂದು ವೇಳೆ, SRH ಅಥವಾ CSK ಯಲ್ಲಿ ಯಾವುದಾದರು ಒಂದು ತಂಡ 16 ಅಥವಾ 18 ಅಂಕಗಳನ್ನು ತಲುಪಿ, ಮತ್ತೊಂದು ತಂಡ 14 ಅಂಕದೊಂದಿಗೆ ಕೊನೆಗೊಂಡರೆ RCB ಯ ಪ್ಲೇಆಫ್ ಕನಸು ಜೀವಂತವಾಗಿರುತ್ತದೆ. ಮತ್ತೊಂದೆಡೆ ಡೆಲ್ಲಿ vs ಲಕ್ನೋ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ 14 ಅಂಕ ಆಗಲಿದೆ. ಹೀಗಿರುವಾಗ RCB 14 ಅಂಕಗಳಲ್ಲಿ 3 ರೀತಿಯಲ್ಲಿ ಟೈ ಆಗಲಿದೆ. ಆಗ ನೆಟ್ ರನ್​ ರೇಟ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ನೆಟ್​ರೇಟ್ ಉತ್ತಮವಾಗಿ​ ಕಾಯ್ದುಕೊಂಡ ತಂಡ 4ನೇ ಸ್ಥಾನ ಪಡೆಯಲಿದೆ. ಪ್ರಸ್ತುತ ಆರ್​’ಸಿಬಿ ಧನಾತ್ಮಕ ನೆಟ್​ರನ್​ ರೇಟ್​ ಹೊಂದಿದ್ದು, ಪ್ಲೇಆಫ್ ಪ್ರವೇಶಿಸುವ ಕನಸು ಇನ್ನೂ ಜೀವಂತವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link