IPL 2025: RCB ಅಭಿಮಾನಿಗಳಿಗೆ ಗುಡ್ ನ್ಯೂಸ್..ಬೆಂಗಳೂರು ತಂಡ ಉಳಿಸಿಕೊಂಡಿರುವ ಐದು ಆಟಗಾರರ ಪಟ್ಟಿ ರಿಲೀಸ್‌

Mon, 30 Sep 2024-9:00 am,

IPL 2025: ಐಪಿಎಲ್ 2025 ರ ಮೊದಲು ಮೆಗಾ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ನಿಯಮಗಳನ್ನು ಹೊರಡಿಸಿದ್ದು, ಅದರಂತೆ, ಪ್ರತಿ ಫ್ರಾಂಚೈಸಿ ತಂಡದಲ್ಲಿ ಗರಿಷ್ಠ ಐದು ಆಟಗಾರರನ್ನು ಉಳಿಸಿಕೊಳ್ಳಲು ತಯಾರಿ ನಡೆಸಿದೆ. ಇದುವರೆಗೂ ಒಂದು ಭಾರಿಯೂ ಕೂಡ ಐಪಿಎಲ್ ಪ್ರಶಸ್ತಿ ಗೆಲ್ಲದ RCB ಫ್ರಾಂಚೈಸಿ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬುದನ್ನು ನೋಡೋಣ.   

ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಸೀಸನ್‌ನಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ. ಲೀಗ್‌ನ ಇತಿಹಾಸದಲ್ಲಿ ಒಂದು ತಂಡಕ್ಕಾಗಿ ಇಡೀ ಋತುವನ್ನು ಆಡಿದ ಏಕೈಕ ಆಟಗಾರ ಕೊಹ್ಲಿ. ಹೀಗಾಗಿ ವಿರಾಟ್ ಮತ್ತೊಮ್ಮೆ ಆರ್‌ಸಿಬಿ ಪಾಲಾಗುವುದು ಬಹುತೇಕ ಖಚಿತವಾಗಿದೆ.  

ಟೀಂ ಇಂಡಿಯಾದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಆರ್‌ಸಿಬಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅದ್ಭುತ ಬೌಲಿಂಗ್‌ ಸಾಮರ್ಥ್ಯ ಹೊಂದಿರುವ ಮೊಹಮ್ಮದ್‌ ಸಿರಾಜ್‌ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಬಲ್ಲರು.ಹೀಗಿರುವಾಗ ಅವರನ್ನು ತಂಡದಿಂದ ಕೈಬಿಡಲು ಫ್ರಾಂಚೈಸಿ ಯೋಚಿಸುವುದಿಲ್ಲ.  

ಕಳೆದ ಐಪಿಎಲ್ ಸೀಸನ್‌ನಲ್ಲಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ವಿಲ್ ಜಾಕ್ಸ್ ಭರ್ಜರಿ ಶತಕ ಸಿಡಿಸಿದ್ದರು. ಬೌಲಿಂಗ್ ನಲ್ಲೂ ಎರಡು ವಿಕೆಟ್ ಪಡೆದರು. ಈ ಮೂಲಕ ಕಳೆದ ಸೀಸನ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಈತನನ್ನು ಆರ್‌ಸಿಬಿ ತಂಡ ಉಳಿಸಿಕೊಳ್ಳುವುದು ಖಚಿತ.   

ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮುಂದುವರಿಯಬಹುದು. ಕಳೆದ ಐಪಿಎಲ್‌ನಲ್ಲಿ ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್‌ನಿಂದ ಆರ್‌ಸಿಬಿಗೆ ಸೇರ್ಪಡೆಗೊಂಡ ಗ್ರೀನ್, ಆಲ್‌ರೌಂಡರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರು. ಅಲ್ಲದೆ, ಫ್ರಾಂಚೈಸಿಯು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬಿಡುಗಡೆ ಮಾಡುವ ಮೂಲಕ ತಂಡದಲ್ಲಿ ಗ್ರೀನ್ ಅನ್ನು ಉಳಿಸಿಕೊಳ್ಳಬಹುದು.  

ರಜತ್ ಪಾಟಿದಾರ್ ಸ್ಪಿನ್ ಮತ್ತು ಪೇಸ್ ಬೌಲಿಂಗ್ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್‌ನ ಕೊನೆಯ 24 ಇನ್ನಿಂಗ್ಸ್‌ಗಳಲ್ಲಿ ಅವರು 35 ರ ಸರಾಸರಿಯಲ್ಲಿ ಮತ್ತು 159 ಸ್ಟ್ರೈಕ್ ರೇಟ್‌ನಲ್ಲಿ 799 ರನ್ ಗಳಿಸಿದರು. ಇದರಲ್ಲಿ 51 ಬೌಂಡರಿ ಹಾಗೂ 54 ಸಿಕ್ಸರ್‌ಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಅವರು ತಂಡದಲ್ಲಿ ಉಳಿಯುವುದು ಬಹುತೇಕ ಖಚಿತವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link