ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್

Mon, 21 Oct 2024-9:45 am,

ದೀಪಾವಳಿಗೂ ಮುನ್ನವೇ ನಿವೃತ್ತ ನೌಕರರಿಗೆ ಸರ್ಕಾರ ಉಡುಗೊರೆ ನೀಡಿದೆ.ಸಿಬ್ಬಂದಿ ಕೊರತೆಯನ್ನು ನೀಗಿಸಲು  65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಉದ್ಯೋಗಿಗಳನ್ನು ಸರ್ಕಾರ ಮರು ನೇಮಕ ಮಾಡಿಕೊಳ್ಳಲಿದೆ.  

ಕಳೆದ ಐದು ವರ್ಷಗಳಲ್ಲಿ ಅವರ ವೈದ್ಯಕೀಯ ಫಿಟ್‌ನೆಸ್ ಮತ್ತು ಕೆಲಸದ ರೇಟಿಂಗ್ ಆಧಾರದ ಮೇಲೆ ನಿವೃತ್ತ ನೌಕರರನ್ನು ನೇಮಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. 

ವರದಿಯ ಪ್ರಕಾರ, ಉದ್ಯೋಗಿಗಳ ಕೊರತೆಯನ್ನು ನಿಭಾಯಿಸಲು, ರೈಲ್ವೆ ಮಂಡಳಿಯು 25,000 ಹುದ್ದೆಗಳಿಗೆ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಿದೆ.ಇದಲ್ಲದೇ ನಿವೃತ್ತ ರೈಲ್ವೇ ನೌಕರರನ್ನು ಮರು ನೇಮಕ ಮಾಡುವ ಮೂಲಕ ಖಾಲಿ ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡುವ ಯೋಜನೆ ಜಾರಿಗೆ ತಂದಿದ್ದಾರೆ.

ಈ ಯೋಜನೆಯಡಿ, 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ನೌಕರರು ಮೇಲ್ವಿಚಾರಕ ಮತ್ತು ಟ್ರ್ಯಾಕ್ ಮ್ಯಾನ್‌ನಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗವು ವಿಸ್ತರಣೆಯ ಆಯ್ಕೆಯೊಂದಿಗೆ ಎರಡು ವರ್ಷಗಳವರೆಗೆ ಇರುತ್ತದೆ  

ಅರ್ಜಿದಾರರು ನಿವೃತ್ತಿಯ ಹಿಂದಿನ ಐದು ವರ್ಷಗಳ ಗೌಪ್ಯ ವರದಿಯಲ್ಲಿ ಉತ್ತಮ ರೇಟಿಂಗ್ ಹೊಂದಿರಬೇಕು. ಇದಲ್ಲದೆ, ಅವರ ವಿರುದ್ಧ ಯಾವುದೇ ವಿಜಿಲೆನ್ಸ್ ಅಥವಾ ಶಿಸ್ತಿನ ಪ್ರಕರಣಗಳು ಬಾಕಿ ಇರಬಾರದು.  

ನೇಮಕಗೊಂಡ ನೌಕರರಿಗೆ ಅವರು ಪಡೆದ ಕೊನೆಯ ವೇತನದಿಂದ ಮೂಲ ಪಿಂಚಣಿಯನ್ನು ಕಡಿತಗೊಳಿಸಿ ಬಾಕಿ ಮೊತ್ತವನ್ನು ಪಾವತಿಸಲಾಗುತ್ತದೆ.ಇದಲ್ಲದೇ ಅವರಿಗೆ ಪ್ರಯಾಣ ಭತ್ಯೆಯನ್ನೂ ನೀಡಲಾಗುವುದು.   

ವಾಯುವ್ಯ ರೈಲ್ವೆಯೊಂದರಲ್ಲೇ 10 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ವರದಿಯ ಪ್ರಕಾರ, ಹೆಚ್ಚುತ್ತಿರುವ ರೈಲು ಅಪಘಾತಗಳು ಮತ್ತು ಉದ್ಯೋಗಿಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link