ಕಾಂತಾರದ ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಚಂದ್ರಕಲಾ ಪತಿ ಇವರೇ ನೋಡಿ ! 8 ವರ್ಷ ಕಿರಿಯವನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದಂತೆ ನಟಿ

Tue, 06 Aug 2024-5:24 pm,

ಕಾಂತಾರ ಸಿನಿಮ ಬಂದು ವರ್ಷಗಳೇ ಕಳೆದಿವೆ. ಆದರೆ ಆ ಸಿನಿಮಾದ ಒಂದೊಂದು ಪಾತ್ರವೂ ಜನಮಾನಸದಲ್ಲಿ ಉಳಿದಿದೆ. 

ಈ ಪೈಕಿ ಉಬ್ಬು ಹಲ್ಲು ಇಟ್ಟುಕೊಂಡು ಕೂದಲು ತುಂಬಾ ಉದುರಿದೆ, ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ ಎನ್ನುವ ಡೈಲಾಗ್ ನಿಂದಲೇ ಫೇಮಸ್ ಆಗಿರುವುದು ಶೀಲಕ್ಕ.   

ಈ ಶೀಲಕ್ಕ ಪಾತ್ರಧಾರಿಯ ನಿಜವಾದ ಹೆಸರು ಚಂದ್ರಕಲಾ.ಇವರು ರಂಗಭೂಮಿ ಕಲಾವಿದೆ. ಮಹಾನ್ ಪ್ರತಿಭಾವಂತೆ.   

ನಿಜ ಜೀವನದಲ್ಲಿ ಚಂದ್ರಕಲಾ ಉಬ್ಬು ಹಲ್ಲನ್ನು ಹೊಂದಿಲ್ಲ.ಮಾತ್ರವಲ್ಲ ಅವರ ಪತಿಯೂ ಬೋಳು ತಲೆಯವರಲ್ಲ.ಬದಲಿಗೆ ಯಾವ ಹಿರೋಗೂ ಕಡಿಮೆಯಿಲ್ಲ ಎನ್ನುವಂಥ ಸುಂದರ. 

ವೃತ್ತಿಯಲ್ಲಿ ವಿಡಿಯೋ ಎಡಿಟರ್ ಆಗಿರುವ ಶಾನ್ ಚಂದ್ರಕಲಾ ಪತಿ. ಇವರು ಚಂದ್ರಕಲಾಗಿಂತ ಎಂಟು ವರ್ಷ ಚಿಕ್ಕವರಂತೆ. 

ಇನ್ನು ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಕಿಡ್ನಾಪ್ ಮಾಡಿದರೆ ನಮ್ಮಲ್ಲಿ ಹುಡುಗಿ ಹುಡುಗನನ್ನು ಕಿಡ್ನಾಪ್ ಮಾಡಿ ಮದುವೆಯಾದದ್ದು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಕ್ಕಿದ್ದಾರೆ.  

ಇವರಿಬ್ಬರದ್ದು ರಂಗಭೂಮಿಯಲ್ಲಿಯೇ ಅರಳಿದ ಪ್ರೀತಿ. ಇವರಿಗೆ ರಾಘವಿ ಎನ್ನುವ ಮುದ್ದು ಮಗಳಿದ್ದಾಳೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link