ಭಾರತೀಯ ಮಾರುಕಟ್ಟೆಗೆ Realme C63 ಸ್ಮಾರ್ಟ್‌ಫೋನ್ ಎಂಟ್ರಿ; ವೈಶಿಷ್ಟ್ಯ & ಬೆಲೆ ತಿಳಿಯಿರಿ
Realme C63 ಸ್ಮಾರ್ಟ್‌ಫೋನ್ ಜುಲೈ 4ರಂದು ಬಿಡುಗಡೆಯಾಗಲಿದೆ. ಇದು 50MP ಕ್ಯಾಮೆರಾ, 5000mAh ಬ್ಯಾಟರಿ, UNISOC T612 ಆಕ್ಟಾ-ಕೋರ್ 12 nm ಪ್ರೊಸೆಸರ್ ಹೊಂದಿದೆ. ಇನ್ನು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
Realme C63 ಸ್ಮಾರ್ಟ್‌ಫೋನ್ ಕೇವಲ 7.74mm ದಪ್ಪವಿದೆ. ಇದು 8GB RAM & ಹೆಚ್ಚುವರಿ 8GB ವರ್ಚುವಲ್ RAM ಹೊಂದಿದೆ. ಇದು Unisoc T612 SoC ಪ್ರೊಸೆಸರ್‌ನೊಂದಿಗೆ(ಜೊತೆಗೆ Mali-G57 GPU)ಕಾರ್ಯನಿರ್ವಹಿಸಲಿದೆ. ಇದರ ಡಿಸ್ಪ್ಲೇಯು 560nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. 50MP ಹಿಂಬದಿಯ ಕ್ಯಾಮರಾ, 8MP ಫ್ರಂಟ್ ಕ್ಯಾಮರಾ ಇರುವ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ.
ರಿಯಲ್‌ಮಿ UI T ಆವೃತ್ತಿಯೊಂದಿಗೆ Android 13 OSನೊಂದಿಗೆ ಕಾರ್ಯನಿರ್ವಹಿಸಲಿದೆ. ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ) ಹೊಂದಿರುವ ಈ ಫೋನ್ 3.5mm ಆಡಿಯೋ ಜ್ಯಾಕ್ (bottom-ported speaker) ಹೊಂದಿದೆ. 167.26×76.67×7.74 mm ಅರಳತೆಯ ಈ ಫೋನ್ 189 ಗ್ರಾಂ (Jade Green)/191 ಗ್ರಾಂ (Leather Blue) ತೂಕ ಹೊಂದಿದೆ. ಇದು ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.=0, GPS + ಗ್ಲೋನಾಸ್, USB ಟೈಪ್-C ಕನೆಕ್ಟಿವಿಟಿ ಆಯ್ಕೆ ಹೊಂದಿದೆ.
ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಅದ್ಭುತವಾಗಿದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಇದು ಏರ್ ಗೆಸ್ಚರ್‌ಗಳನ್ನು ಹೊಂದಿದ್ದು, ಕಾಲ್‌ಗಳಿಗೆ ಉತ್ತರಿಸಲು, ಇನ್‌ಕಮಿಂಗ್ ಕರೆ ಮ್ಯೂಟ್ ಮಾಡಲು & ವಿಡಿಯೋ ಸ್ಟ್ರೀಮ್‌ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆ ಹೊಂದಿದೆ.
ರಿಯಲ್‌ಮಿ C63 ಜೂನ್ 5ರಿಂದ ಇಂಡೋನೇಷ್ಯಾದಲ್ಲಿ ಮಾರಾಟ ಆರಂಭಿಸಿತ್ತು. ಇಂಡೋನೇಷಿಯನ್ ವೆಬ್‌ಸೈಟ್‌ನಲ್ಲಿ ಇದರ ಆರಂಭಿಕ ಬೆಲೆ 10,250 ರೂ. ಇತ್ತು. 6GB/128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 10,250 ರೂ.(IDR1,999,000 = $125/€115)ಇದೆ. 8GB/128GB ಸ್ಟೋರೇಜ್ ಮಾದರಿಯ ಬೆಲೆ 11,790 ರೂ. (IDR2,299,000 = $140/€130) ಇದೆ. ಭಾರತದಲ್ಲಿ ಇದೇ ಬೆಲೆಗೆ ಬಿಡುಗಡೆಯಾಗುತ್ತಾ? ಅಥವಾ ಬೇರೆ ಬೆಲೆಯೊಂದಿಗೆ ಲಾಂಚ್ ಆಗುತ್ತಾ? ಅಂತಾ ಕಾದುನೋಡಬೇಕಿದೆ.