ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ `ಕಲ್ಕಿ`...!

Sun, 14 Jul 2024-4:02 pm,

ಜೂನ್ 27 ರಂದು ಬಿಡುಗಡೆಯಾದ ಕಲ್ಕಿ ಚಿತ್ರವು ಕೇವಲ 14 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ವಿಶ್ವದಾದ್ಯಂತ 1002 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಈ ಮೂಲಕ ಬಾಹುಬಲಿ ನಂತರ ಪ್ರಭಾಸ್ ಮತ್ತೊಮ್ಮೆ ಸಾವಿರ ಕೋಟಿ ಸಿನಿಮಾ ಮಾಡಿದ ಭಾರತೀಯ ತಾರೆ ಎಂಬ ದಾಖಲೆ ನಿರ್ಮಿಸಿದ್ದಾರೆ.  

"ಕಲ್ಕಿ" ವಿಶ್ವದಾದ್ಯಂತ 1000 ಕೋಟಿ ರೂಪಾಯಿಗಳ ಒಟ್ಟು ಕಲೆಕ್ಷನ್‌ಗಳನ್ನು ಗಳಿಸಿದ್ದು,  ರೆಬೆಲ್ ಸ್ಟಾರ್ ಪ್ರಭಾಸ್ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 

ಬೃಹತ್ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸುವ ತ್ರಾಣವನ್ನು ಪ್ರಭಾಸ್ ಹೊಂದಿದ್ದಾರೆ ಎಂದು ಹೇಳಲು ಕಲ್ಕಿ ಇತ್ತೀಚಿನ ಉದಾಹರಣೆಯಾಗಿದೆ.

ಕಲ್ಕಿಯ ಐತಿಹಾಸಿಕ ಯಶಸ್ಸಿನೊಂದಿಗೆ, ಪ್ರಭಾಸ್ ಅವರ ಮುಂಬರುವ ಯೋಜನೆಗಳು ಹೆಚ್ಚು ಹೈಪ್ ಕ್ರಿಯೇಟ್ ಮಾಡುತ್ತಿವೆ. ಪ್ರಭಾಸ್ ಪ್ರಸ್ತುತ ಮಾರುತಿ ನಿರ್ದೇಶನದ ರಾಜಾ ಸಾಬ್, ಪ್ರಶಾಂತ್ ನೀಲ್ ಅವರೊಂದಿಗೆ ಸಲಾರ್ 2, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಮತ್ತು ಹನು ರಾಘವಪುಡಿ ಅವರೊಂದಿಗೆ ಕ್ರೇಜಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಾಹುಬಲಿ ನಂತರ ಪ್ರಭಾಸ್ ಮತ್ತೊಮ್ಮೆ ಸಾವಿರ ಕೋಟಿ ಸಿನಿಮಾ ಮಾಡಿದ ಭಾರತೀಯ ತಾರೆ ಎಂಬ ದಾಖಲೆ ನಿರ್ಮಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link