`ಈಕೆಯ ಮಗುವಾಗಿ ಮತ್ತೆ ಬರ್ತೀನಿ... ಮರುಜನ್ಮ ಪಡೆಯುತ್ತೇನೆ` : ಪ್ರಖ್ಯಾತ ಪುನರ್ಜನ್ಮ ತಜ್ಞರ ಬಳಿ ಮಾತನಾಡಿದ ಪುನೀತ್ ರಾಜ್‌ಕುಮಾರ್ ಆತ್ಮ!?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪುನರ್ಜನ್ಮ ತಜ್ಞ ರಾಮಚಂದ್ರ ಗುರೂಜಿಯವರು, ತಾನು ಪುನೀತ್ ರಾಜ್ ಕುಮಾರ್ ಅವರ ಆತ್ಮದ ಜೊತೆ ಮಾತನಾಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಗುರೂಜಿ ಬಳಿ ಪುನೀತ್ ಅವರ ಆತ್ಮ ಮಾತನಾಡಿದ್ದೇನು? ಇವರು ಕೇಳಿದ ಪ್ರಶ್ನೆಗಳೇನು? ಎಂಬೆಲ್ಲಾ ವಿಚಾರದ ಬಗ್ಗೆ ಮುಂದೆ ತಿಳಿಯೋಣ.
ಈ ಹಿಂದೆ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜನ್ಮಾಂತರ’ ಕಾರ್ಯಕ್ರಮವನ್ನು ಇದೇ ಪುನರ್ಜನ್ಮ ತಜ್ಞ ರಾಮಚಂದ್ರ ಗುರೂಜಿ ನಡೆಸಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಈ ಕಾಯ್ರಕ್ರಮದಲ್ಲಿ ಭಾಗವಹಿಸಿದ್ದರು.
2021 ಅಕ್ಟೋಬರ್ 29ರಂದು ಪುನೀತ್ ರಾಜ್ ಕುಮಾರ್ ಹೃದಯದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದರು. ಇಂದಿಗೆ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷಗಳೇ ಕಳೆದಿವೆ. ಆದರೆ ಅವರ ನೆನಪು, ಅವರು ಮಾಡಿದ ಕೆಲಸಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ನೆಲೆಗೊಂಡಿದೆ ಎಂದೇ ಹೇಳಬಹುದು.
ರಾಮಚಂದ್ರ ಗುರೂಜಿ ಕೇಳಿದ ಮೊದಲ ಪ್ರಶ್ನೆ, “ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಊಹಾಪೋಹಗಳಿವೆ, ಇದು ನಿಜನಾ?”- ಈ ಪ್ರಶ್ನೆಗೆ “ಇಲ್ಲ, ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಮೃತಪಟ್ಟಿದ್ದೇನೆ” ಎಂದಿದ್ದಾರೆ.
ಎರಡನೇ ಪ್ರಶ್ನೆ, “ದೇಹದಿಂದ ಬಿಟ್ಟು ಹೋದ ನಂತರ ಈಗ ಎಲ್ಲಿದ್ದೀರಿ?”- ಅದಕ್ಕೆ, “ಅಪ್ಪ-ಅಮ್ಮನ ಹುಡುಕಾಟದಲ್ಲಿ ಇದ್ದೇನೆ’ ಎಂದಿದ್ದಾರೆ.
ಮೂರನೇ ಪ್ರಶ್ನೆ, “ಮತ್ತೆ ಹುಟ್ಟಿ ಬರ್ತಿರಾ?- ಅದಕ್ಕೆ, “ಅದರ ಬಗ್ಗೆ ಯೋಚನೆ ಮಾಡಿಲ್ಲ. ಹುಟ್ಟಿ ಬರುವುದಾದರೆ ನಾನು ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುತ್ತೇನೆ, ಮರುಜನ್ಮ ಪಡೆಯುತ್ತೇನೆ” ಎಂದು ಹೇಳಿರುವುದಾಗಿ ಗುರೂಜಿ ಸಂದರ್ಶನದಲ್ಲಿ ಹೇಳಿದ್ದಾರೆ.