Reliance Jio ಅದ್ಭುತ ಪ್ಲಾನ್, ಕೇವಲ ರೂ.2 ಹೆಚ್ಚುವರಿ ನೀಡಿ 365GB ಡೇಟಾ ಪಡೆಯಿರಿ
Reliance Jio Recharge Plans - ರಿಲಯನ್ಸ್ ಜಿಯೋನಲ್ಲಿ (Reliance Jio) ವರ್ಷವಿಡೀ ನಡೆಯುವ ಹಲವು ಯೋಜನೆಗಳಿವೆ. ನೀವೂ ಕೂಡ ಒಂದು ವೇಳೆ ಪದೇ ಪದೇ ಫೋನ್ ರೀಚಾರ್ಜ್ ಮಾಡುವ ತಾಪತ್ರಯದಿಂದ ಪಾರಾಗಲು ಬಯಸುತ್ತಿದ್ದರೆ. ಒಂದು ವರ್ಷದ ವಾಲಿಡಿಟಿಯ ಈ ಯೋಜನೆಗಳು (Reliance Jio Annual Recharge Plans) ನಿಮಗೆ ಉತ್ತಮವೆಂದು ಸಬೀತಾಗಬಹುದು. ಇಂದು ನಾವು ನಿಮಗೆ ರಿಲಯನ್ಸ್ ಜಿಯೋದ ಎರಡು ವಾರ್ಷಿಕ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಗಳಲ್ಲಿ ನೀವು ಕೇವಲ 2 ರೂ. ಹೆಚ್ಚು ಪಾವತಿಸುವ ಮೂಲಕ ಡಬಲ್ ಡೇಟಾ ಲಾಭವನ್ನು ಪಡೆಯಬಹುದು. ಹಾಗಾದರೆ ಈ ಜಿಯೋ ಯೋಜನೆಗಳು (Reliance Jio Best Recharge Plan) ಯಾವುವುಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಜಿಯೋ ಕಂಪನಿಯ ರೂ 2397 ಪ್ಲಾನ್: ರಿಲಯನ್ಸ್ ಜಿಯೋದ ಈ ಯೋಜನೆಯ ಮಾನ್ಯತೆಯು 365 ದಿನಗಳು. ಯೋಜನೆಯಲ್ಲಿ ಒಟ್ಟು 365GB ಡೇಟಾ ಲಭ್ಯವಿದೆ. ಈ ಪ್ಲಾನ್‌ನ ವಿಶೇಷತೆ ಎಂದರೆ, ನೀವು 365GB ಯಲ್ಲಿ ಎಷ್ಟು ಬೇಕಾದಷ್ಟು ಡೇಟಾವನ್ನು ಒಂದೇ ದಿನದಲ್ಲಿ ಬಳಸಬಹುದು. ಅಂದರೆ, ಪ್ರತಿದಿನ ಖರ್ಚು ಮಾಡಬಹುದಾದ ಡೇಟಾಗೆ ಯಾವುದೇ ರೀತಿಯ ಮಿತಿಯಿಲ್ಲ. ಈ ಯೋಜನೆಯು ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡುವ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ಪ್ರತಿದಿನ 100 SMS ಕಳುಹಿಸುವ ಸೌಲಭ್ಯವನ್ನು ಸಹ ಒಳಗೊಂಡಿದೆ. ಅಲ್ಲದೆ, ಇದರಲ್ಲಿ ಜಿಯೋ ಆಪ್‌ಗಳಿಗೆ ಉಚಿತ ಚಂದಾದಾರಿಕೆ ಕೂಡ ಲಭ್ಯವಿರಲಿವೆ.
ಜಿಯೋ ಕಂಪನಿಯ ರೂ 2399 ಪ್ಲಾನ್: ಇದರ ವ್ಯಾಲಿಡಿಟಿ 365 ದಿನಗಳು. ಯೋಜನೆಯಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಅಂದರೆ, ಜಿಯೋದ ಈ ಯೋಜನೆಯಲ್ಲಿ ಒಟ್ಟು 730GB ಡೇಟಾ ಲಭ್ಯವಿದೆ. ಜಿಯೋದ ಈ ಯೋಜನೆಯಲ್ಲಿ, ಉಚಿತ ಕರೆಗಳ ಪ್ರಯೋಜನವು ಯಾವುದೇ ನೆಟ್‌ವರ್ಕ್‌ನಲ್ಲಿ ಲಭ್ಯವಿದೆ. ಅಲ್ಲದೆ, ಪ್ರತಿದಿನ 100 SMS ಕಳುಹಿಸುವ ಸೌಲಭ್ಯವಿದೆ. ಜಿಯೋ ಆಪ್‌ಗಳ ಚಂದಾದಾರಿಕೆ ಈ ಯೋಜನೆಯಲ್ಲಿಯೂ ಕೂಡ ಉಚಿತವಾಗಿ ಲಭ್ಯವಿದೆ.
ಯಾವ ಯೋಜನೆ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ: ಎರಡೂ ಯೋಜನೆಗಳು ಬಹುತೇಕ ಒಂದೇ ಬೆಲೆ ಮತ್ತು ಸಮಾನ ಮಾನ್ಯತೆಯನ್ನು ಹೊಂದಿವೆ. ಇದರಲ್ಲಿ, ಅನಿಯಮಿತ ಕರೆ, SMS ಮತ್ತು ಇತರೆ ಹೆಚ್ಚುವರಿ ಪ್ರಯೋಜನಗಳು ಲಭ್ಯವಿದೆ. ನೀವು ರೂ. 2397 ಕ್ಕೆ 365 ಜಿಬಿ ಡೇಟಾವನ್ನು ಪಡೆದರೂ, ರೂ. 2399 ಕ್ಕೆ 730 ಜಿಬಿ ಡೇಟಾ ಲಭ್ಯವಿದೆ. ಇದರರ್ಥ ನೀವು ರೂ 2 ಹೆಚ್ಚುವರಿ ಪಾವತಿಸುವ ಮೂಲಕ 365 GB ಹೆಚ್ಚುವರಿ ಡೇಟಾವನ್ನು (Reliance Jio Double Data Plan) ಪಡೆಯಬಹುದು.