Split Ends Remedies: ಕೂದಲು ಟಿಸಿಲೊಡೆಯುವ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುತ್ತದೆ ಈ ಮನೆ ಮದ್ದುಗಳು

Thu, 08 Feb 2024-1:40 pm,

ಬದಲಾಗುತ್ತಿರುವ ಋತುಗಳಲ್ಲಿ ಕೂದಲು ಉದುರುವಿಕೆಯೊಂದಿಗೆ ಇತರ ಹಲವು ಸಮಸ್ಯೆಗಳು ಕಂಡುಬರುತ್ತವೆ. ಕೂದಲಿನಲ್ಲಿ Split Ends ಕಾಣಿಸಿಕೊಂಡಾಗ ಅವುಗಳನ್ನು ಕತ್ತರಿಸಲಾಗುತ್ತದೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಇದನ್ನು ಹೋಗಲಾಡಿಸಲು,  ರಾಸಾಯನಿಕಗಳಿಲ್ಲದ ಉತ್ತಮ ಶಾಂಪೂವನ್ನು ಬಳಸಬೇಕು. ಕೂದಲಿಗೆ ಶಾಂಪೂ ಹಚ್ಚಿದ  ನಂತರ, ಕಂಡಿಷನರ್ ಅನ್ನು ಬಳಸಬೇಕು. ಹೀಗೆ ಮಾಡಿದರೆ ಇದು Split Ends ಸಮಸ್ಯೆ  ಕಡಿಮೆಯಾಗುತ್ತದೆ.   

ಕೂದಲ ತುದಿ ಒಡೆಯಲು ಆರಂಭವಾದರೆ ಅದು ಬಹಳ ಕೆಟ್ಟದಾಗಿ ಕಾಣಿಸುತ್ತದೆ. ಇದರಿಂದಾಗಿ ಕೂದಲು ಸಂಪೂರ್ಣವಾಗಿ ನಿರ್ಜೀವವಾಗಿ ಬೆಳವಣಿಗೆ ನಿಲ್ಲಿಸುತ್ತದೆ. ನೀವು ವಾರಕ್ಕೊಮ್ಮೆ ಹೇರ್ ಮಾಸ್ಕ್ ಅನ್ನು ಬಳಸಬೇಕು. ಈ ಹೇರ್ ಮಾಸ್ಕ್ ಅನ್ನು ಮನೆಯಲ್ಲಿಯೇ  ತಯಾರಿಸಬಹುದು. ಮೊಟ್ಟೆಯ ಹಳದಿ ಭಾಗವನ್ನು ಹೇರ್ ಮಾಸ್ಕ್ ಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.ಅಲೋವೆರಾ ಮಾಸ್ಕ್ ಅನ್ನು ಕೂಡಾ ಹಚ್ಚಬಹುದು.    

ತಮ್ಮ ಕೂದಲನ್ನು ಪದೇ ಪದೇ ಬ್ರಷ್ ಮಾಡುವವರಿದ್ದಾರೆ. ಆದರೆ ಹಾಗೆ ಮಾಡಬಾರದು. ಇದು ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲು ಒಡೆಯುವುದು ಕೂಡಾ ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದಕೂದಲಿನಲ್ಲಿರುವ ತೇವಾಂಶವೆಲ್ಲವೂ ಮಾಯವಾಗುತ್ತದೆ. 

Split Ends  ಸಮಸ್ಯೆಯನ್ನು ಹೋಗಲಾಡಿಸಲು, ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಬೇಕು. ಆಯಿಲ್ ಮಸಾಜ್ ಮಾಡುವುದರಿಂದ ಕೂದಲು ಉದ್ದ, ದಪ್ಪ ಮತ್ತು ಮೃದುವಾಗುತ್ತದೆ. ಆಯಿಲ್ ಮಾಸಾಜ್ ಮಾಡುವುದರಿಂದ  Split Ends ಸಮಸ್ಯೆಯೂ ಪರಿಹಾರವಾಗುತ್ತದೆ. ಕೂದಲನ್ನು ತಣ್ಣೀರಿನಿಂದ ತೊಳೆಯಬೇಕು ಎನ್ನುವುದು ಕೂಡಾ ಬಹಳ ಮುಖ್ಯ.   

ಪಪ್ಪಾಯಿವನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ಕೂದಲನ್ನು ಸಹ ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. Split Ends ಸಮಸ್ಯೆಯೂ ದೂರವಾಗುತ್ತದೆ. (ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link