Puja Flower: ಕೌಟುಂಬಿಕ ಸುಖ-ಸಂತೋಷಕ್ಕಾಗಿ ಪೂಜೆಗೆ ಬಳಸಿದ ಹೂವುಗಳ ಪರಿಹಾರ
ವಾಸ್ತು ಶಾಸ್ತ್ರದಲ್ಲಿ ಒಣಗಿನ ಹೂವುಗಳಿಂದ ನಿಮ್ಮ ಅದೃಷ್ಟವನ್ನು ಬದಲಾಯಿಸಲು, ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಪೂಜೆಯಲ್ಲಿ ಬಳಸಿದ ಹೂವು, ಹೂವಿನ ಹಾರ ಒಣಗಿದ ಮೇಲೆ ಅದನ್ನು ಹೇಗೆ ಬಳಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ ಎಂದು ತಿಳಿಯೋಣ...
ಒಣಗಿದ ಹೂವು/ಹೂವಿನ ಹಾರದ ಪರಿಹಾರಗಳು: ದೇವ-ದೇವತೆಗಳನ್ನು ಮೆಚ್ಚಿಸಲು ಪೂಜೆಯಲ್ಲಿ ಹೂವು-ಹೂವಿನ ಹಾರವನ್ನು ಬಳಸುವುದು ನಿಮಗೆ ಗೊತ್ತೇ ಇದೆ. ಈ ಹೂವು ಅಥವಾ ಹೂಮಾಲೆಗಳು ಒಣಗಿನದಾಗ ಜನರು ಇದನ್ನು ಎಸೆಯುತ್ತಾರೆ. ಇಲ್ಲವೇ, ಹರಿಯುವ ನೀರಿನಲ್ಲಿ ಬಿಡುತ್ತಾರೆ. ಆದರೆ ಇದೇ ಹೂವುಗಳು ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಅದೃಷ್ಟ ಬದಲಾಯಿಸಬಲ್ಲ ಒಣ ಹೂವುಗಳು: ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ, ಈ ಒಣ ಹೂವುಗಳಿಂದ ಗೊಬ್ಬರ ತಯಾರಿಸಿ ನಿಮ್ಮ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಇದನ್ನು ಗಿಡಕ್ಕೆ ಹಾಕಿ. ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗಿ ಆರ್ಥಿಕ ಸಂಕಷ್ಟದಿಂದ ಮುಕ್ತಿ ನೀಡುತ್ತಾಳೆ ಎಂಬ ನಂಬಿಕೆ ಇದೆ.
ಧನಾತ್ಮಕ ಶಕ್ತಿ: ಏನಾದರೂ ವಿಶೇಷ ಪೂಜೆ ಮಾಡಿದ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಹೂವು ಒಣಗಿದ ನಂತರ ಇದನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿರಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ.
ಪ್ರಸಾದ: ನೀವು ದೇವಸ್ಥಾನದಲ್ಲಿ ಪ್ರಸಾದವಾಗಿ ಸ್ವೀಕರಿಸುವ ಹೂವು ಒಣಗಿದ ನಂತರ ಅದನ್ನು ಎಲ್ಲೆಲ್ಲೂ ಬಿಸಾಡುವ ಬದಲಿಗೆ ಅದನ್ನು ಹಾಗೆ ಇಟ್ಟು ಹರಿಯುವ ನೀರಿನಲ್ಲಿ ಬಿಡಿ. ಇದು ಮನೆಯಲ್ಲಿ ಸುಖ-ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.