Train Accident: ರೈಲು ಯಾತ್ರೆಯ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಡಿ, ದುರಂತದ ವೇಳೆ ಪ್ರಾಣ ರಕ್ಷಿಸಿಕೊಳ್ಳಬಹುದು
1. ರೈಲಿನ ಪ್ರತಿಯೊಂದು ಕೋಚ್‌ನಲ್ಲಿಯೂ ಅನೇಕ ಪೋಸ್ಟರ್‌ಗಳಿತ್ತವೆ, ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಅವುಗಳಲ್ಲಿ ಬರೆಯಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ನಿರ್ಲಕ್ಷಿಸಬೇಡಿ. ಪ್ರತಿ ಎಚ್ಚರಿಕೆ ಮತ್ತು ಪ್ರಮುಖ ವಿಷಯವನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನು ಪೇಪರ್ ಅಥವಾ ಮೊಬೈಲ್‌ನಲ್ಲಿ ಶೇಖರಿಸಿ ಇರಿಸಿ ಅಥವಾ ಅದರ ಫೋಟೋ ತೆಗೆದುಕೊಳ್ಳಿ.
2 ಸಾಧ್ಯವಾದರೆ, ನಿಮ್ಮ ಮಾರ್ಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. ಆ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳಿವೆ ಮತ್ತು ಅವು ಪರಸ್ಪರ ಎಷ್ಟು ದೂರದಲ್ಲಿವೆ ಎಂಬುದನ್ನು ತಿಳಿದುಕೊಳ್ಳಿ. ಇದರಿಂದ, ಆಸ್ಪತ್ರೆ ಮತ್ತು ಇತರ ಯಾವುದೇ ಪ್ರಮುಖ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಿಮಗೆ ಅನುಕೂಲವಾಗುತ್ತದೆ. ರೈಲ್ವೆ ಅಪ್ಲಿಕೇಶನ್ ಮತ್ತು ಗೂಗಲ್ ಅನ್ನು ಬಳಸಿಕೊಂಡು ನೀವು ಇಂತಹ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.
3. ರೈಲು ಅಪಘಾತ ಸಂಭವಿಸಿದ ತಕ್ಷಣ, ನೀವು ಮೊದಲು ಅಪಘಾತ ಕೋಚ್ನಿಂದ ಹೊರಬರಲು ಪ್ರಯತ್ನಿಸಬೇಕು. ಬೆಂಕಿಯ ಅಪಾಯವಿದ್ದಾಗ ಇದು ಮತ್ತಷ್ಟು ಮುಖ್ಯವಾಗುತ್ತದೆ. IRCTC ಸೈಟ್‌ನಿಂದ ನೀವು ಟಿಕೆಟ್ ಬುಕ್ ಮಾಡಿದಾಗಲೆಲ್ಲಾ, ನೀವು ವಿಮಾ ರಕ್ಷಣೆಯನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತೀರಿ. ಹೀಗಾಗಿ ಅದನ್ನು ನಿರ್ಲಕ್ಷಿಸಬೇಡಿ.
4. ಯಾವುದೇ ಅಪಘಾತದ ಸಂದರ್ಭದಲ್ಲಿ, ರೈಲ್ವೆ ನಿರ್ವಾಹಕರು ಮತ್ತು ನೌಕರರ ಸೂಚನೆಗಳಿಗೆ ಗಮನ ಕೊಡಿ. ಅಪಘಾತ ಸಂಭವಿಸಿದ ತಕ್ಷಣ ಸುರಕ್ಷಿತ ಸ್ಥಳವನ್ನು ತಲುಪಿ ಮತ್ತು ತುರ್ತು ಸಂಖ್ಯೆಗಳಿಗೆ ಕರೆ ಮಾಡಿ. ಅಪಘಾತದ ಸಮಯದಲ್ಲಿ ನೀವು ನಡೆಯಲು ಸಾಧ್ಯವಾದರೆ, ನೀವು ಇತರರಿಗೆ ಸಹಾಯ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನೀವು ಶಾಂತವಾಗಿಟ್ಟುಕೊಳ್ಳಿ ಮತ್ತು ಗಾಯಗೊಂಡವರಿಗೆ ಸಹಾಯ ಮಾಡಲು ಪ್ರಯತ್ನಿಸಿ.
5. ಅಪಘಾತದ ಸಮಯದಲ್ಲಿ ನೀವು ಗಾಯಗೊಂಡು ಪ್ರಜ್ಞೆ ಹೊಂದಿದ್ದರೆ, ನಂತರ ಅಲ್ಲಿರುವ ಜನರಿಗೆ ಅಗತ್ಯ ಮಾಹಿತಿ ನೀಡಿ. ಅಪಘಾತದ ಸಮಯದಲ್ಲಿ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವೈದ್ಯಕೀಯ ಸ್ಥಿತಿಯ ಬಗ್ಗೆ ವೈದ್ಯರಿಗೆ ತಿಳಿಸಿ.
6. ಚಿಕಿತ್ಸೆಯ ಸಮಯದಲ್ಲಿ ನಿಮಗೆ ನೀಡಿದ ವೈದ್ಯಕೀಯ ವರದಿ ಮತ್ತು ಇತರ ಪೇಪರ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಲು ಅವರು ನಿಮಗೆ ಸಹಾಯ ಮಾಡುತ್ತದೆ.
7. ಇಂಟರ್ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್ (ICDO), ಪ್ರಪಂಚದ ಅನೇಕ ದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸುವ ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಅಪಘಾತಗಳ ಮೊದಲು, ಅಪಘಾತ ನಡೆದ ಸಮಯದಲ್ಲಿ ಮತ್ತು ಅಪಘಾತದ ನಂತರ ವಹಿಸಿಕೊಳ್ಳಬೇಕಾದ ಮುಂಜಾಗ್ರತೆಯ ಕುರಿತು ಸಲಹೆಗಳನ್ನು ನೀಡುತ್ತದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವೂ ನಿಮ್ಮ ಪ್ರಯಾಣವನ್ನು ಯಶಸ್ವಿ, ಆಹ್ಲಾದಕರ ಮತ್ತು ಮಂಗಳಕರವಾಗಿಸಬಹುದು.