ವಿಚ್ಛೇದನ ವದಂತಿ ಮಧ್ಯೆಯೇ ಮತ್ತೊಂದು ಮಾಹಿತಿ!ಹೆರಿಗೆ ವೇಳೆ ಇದೊಂದು ಕೆಲಸ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದರಂತೆ ಐಶ್ವರ್ಯಾ ರೈ! ಅಷ್ಟಕ್ಕೂ ಈ ತೀರ್ಮಾನದ ಹಿಂದಿನ ಕಾರಣ ಏನು?
ತಾಯ್ತನ ಎನ್ನುವುದು ಪ್ರತೀ ಹೆಣ್ಣಿನ ಬದುಕಿನಲ್ಲಿ ಬರುವ ಸುಂದರ ಅನುಭವ. ಪ್ರತಿಯೊಬ್ಬ ಮಹಿಳೆಯ ಮನಸ್ಸು ಕೂಡಾ ತಾಯ್ತನಕ್ಕಾಗಿ ಹಂಬಲಿಸುತ್ತದೆ. ತಾಯಿಯಾದರಷ್ಟೇ ಮಹಿಳೆಯ ಜೀವನ ಪರಿಪೂರ್ಣ ಎನ್ನುವ ಮಾತೂ ಇದೆ.
ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಮದುವೆ, ಸಂಸಾರ,ಮಕ್ಕಳು ಎಲ್ಲವೂ ಅವರ ನಿರ್ಧಾರದ ಪ್ರಕಾರವೇ ನಡೆಯುತ್ತದೆ ಎನ್ನುವ ಮಾತಿದೆ.
ಸಾಮಾನ್ಯವಾಗಿ ಮದುವೆಗೆ ಒಂದು ಸರಿಯಾದ ವಯಸ್ಸು ಎನ್ನುವುದಿದೆ. ಈ ವಯಸ್ಸಿಗೆ ಮದುವೆಯಾದರೆ, ಈ ವಯಸ್ಸಿಗೆ ಮಕ್ಕಳಾಗುತ್ತದೆ ಎನ್ನುವ ಲೆಕ್ಕಾಚಾರ ಜನಸಾಮಾನ್ಯರದ್ದು.
ಆದರೆ ಸೆಲೆಬ್ರಿಟಿಗಳು ಹಾಗಲ್ಲ. ಅವರು ಒಂದು ವಯಸ್ಸಿನ ಗಡಿ ದಾಟಿದ ಮೇಲೆಯೇ ಸಾಂಸಾರಿಕ ಜೀವನಕ್ಕೆ ಕಾಲಿಡುವುದು. ಬಾಲಿವುಡ್ ನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡಾ ಇದಕ್ಕೆ ಹೊರತಲ್ಲ.
ಐಶ್ವರ್ಯ ರೈ ತನ್ನ 34 ನೇ ವಯಸ್ಸಿನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಸಪ್ತಪದಿ ತುಳಿಯುತ್ತಾರೆ. ನಂತರ ನಾಲ್ಕು ವರ್ಷದ ನಂತರ ಅಂದರೆ ತನ್ನ 38ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ.
40 ರ ಆಸುಪಾಸಿನಲ್ಲಿ ಮಗುವಿಗೆ ಜನ್ಮ ನೀಡಿದರೂ ತನಗೆ ನಾರ್ಮಲ್ ಡೆಲಿವೆರಿಯೇ ಆಗಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿದ್ದರಂತೆ.ಇದಕ್ಕಾಗಿ ವೈದ್ಯರು ನೀಡುವ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರಂತೆ.
ಸಾಮಾನ್ಯವಾಗಿ30 -35 ರ ನಂತರ ನಾರ್ಮಲ್ ಡೆಲಿವೆರಿ ಸ್ವಲ್ಪ ಕಷ್ಟ ಎಂದು ಹೇಳುತ್ತಾರೆ. ಆದರೆ 38 ನೇ ವಯಸ್ಸಿನಲ್ಲಿ ನಾರ್ಮಲ್ ಡೆಲಿವೆರಿ ಮಾಡಿಸಿಕೊಂಡಿದ್ದಾರೆ ಐಶ್ವರ್ಯಾ.
ಹೆರಿಗೆ ನೋವಿಗೆ ಹೆದರಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸಿಸೇರಿಯನ್ ಆಪರೇಷನ್ ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಮಧ್ಯೆ ಐಶ್ವರ್ಯಾ ನಡೆ ಮೆಚ್ಚುವಂಥದ್ದೇ.