Rice Water: ಅಕ್ಕಿ ತೊಳೆದ ನೀರನ್ನು ಬಿಸಾಡುವ ಬದಲಿಗೆ ಈ ರೀತಿ ಬಳಸಿ ಸೌಂದರ್ಯ ಹೆಚ್ಚಿಸಿ
ನಾವೆಲ್ಲರೂ ಸಾಮಾನ್ಯವಾಗಿ ಅಕ್ಕಿ ತೊಳೆದು ಅದರ ನೀರನ್ನು ಚೆಲ್ಲುತ್ತೇವೆ. ಆದರೆ ಚೀನಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ.
ವಾಸ್ತವವಾಗಿ, ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್ ಬಿ, ಸಿ ಮತ್ತು ಇ ಜೊತೆಗೆ ಅಮೈನೋ ಆಮ್ಲಗಳು ಕಂಡು ಬರುವುದರಿಂದ ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭದಾಯಕ ಎನ್ನಲಾಗುತ್ತದೆ.
ಅಕ್ಕಿ ತೊಳೆದ ನೀರನ್ನು ಕೂದಲಿಗೆ ಬಳಸುವುದರಿಂದ ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸ್ಪ್ಲಿಟ್ ಹೇರ್ ಸಮಸ್ಯೆ ನಿವಾರಿಸಿ, ಕೂದಲು ಹೊಳೆಯುವಂತೆ ಮಾಡಲು ಅಕ್ಕಿ ನೀರನ್ನು ಕೂದಲಿಗೆ ಬಳಸಿ.
ನಿಯಮಿತವಾಗಿ ಅಕ್ಕಿ ನೀರಿನಿಂದ ಮುಖ ತೊಳೆಯುವುದರಿಂದ ಇದು ಚರ್ಮವನ್ನು ಮೃದುವಾಗಿಸಿ, ಕಲೆ ನಿವಾರಿಸಿ, ಕಾಂತಿಯುತ ತ್ವಚೆ ನೀಡುವಲ್ಲಿ ಸಹಕಾರಿ ಎಂದು ಸಾಬೀತುಪಡಿಸಬಹುದು.
ಅಕ್ಕಿ ತೊಳೆದ ನೀರಿನಿಂದ ವಾಶ್ ಮಾಡುವುದರಿಂದ ಚರ್ಮದ ಕಿರಿ ಕಿರಿ, ಚರ್ಮದ ಅಲರ್ಜಿಯಿಂದ ಪರಿಹಾರ ಪಡೆಯಬಹುದು.
ಅಕ್ಕಿ ತೊಳೆದ ನೀರು ಉತ್ತಮ ಆಂಟಿ ಏಜಿಂಗ್ ಆಗಿ ಕಾರ್ಯನಿರ್ವಹಿಸುವುದರೊಂದಿಗೆ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಸಹಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.